ನೀನಾಸಂ ಸತೀಶ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪೋಸ್ಟರ್ ಶುರುವಾಗುವುದೇ ವಾಜಪೇಯಿ ಅವರ ಪ್ರಖ್ಯಾತ ಹೇಳಿಕೆಯೊಂದಿಗೆ. ಜಾತ್ಯತೀತವಾಗಿಲ್ಲದೇ ಇದ್ದರೆ, ಅದು ಭಾರತವೇ ಅಲ್ಲ ಎಂಬ ಘೋಷದೊಂದಿಗೆ.
ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಶ್ರದ್ಧಾ ಶ್ರೀನಾಥ್, ಸೋನು ಗೌಡ, ರಕ್ಷಾ ಸೋಮಶೇಖರ್.. ಎಲ್ಲರ ಲುಕ್ ಪರಿಚಯವೂ ಮೋಷನ್ ಪೋಸ್ಟರ್‍ನಲ್ಲಿ ಸಿಗುತ್ತೆ. ಆದರೆ.. ವಾಜಪೇಯಿ ಬಂದಿದ್ದೇಕೆ, ಎಮರ್ಜೆನ್ಸಿ ಪ್ರಸ್ತಾಪ ಏಕೆ.. ಎಂಬ ಕುತೂಹಲಗಳು ಹಾಗೆಯೇ ಉಳಿದುಬಿಡುತ್ತವೆ.
ಕೆ.ಎಸ್.ನಂದೀಶ್ ನಿರ್ದೇಶನದ ಗೋದ್ರಾ ಚಿತ್ರಕ್ಕೆ ಜಾಕಬ್ ಫಿಲ್ಮ್ಸ್ ಮತ್ತು ಲೀಡರ್ ಫಿಲ್ಮ್ಸ್ ನಿರ್ಮಾಪಕರು.