ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಜರಂಗಿ 2 ಮೂಲಕ 2020ರಲ್ಲಿ ಮೊದಲ ದರ್ಶನ ಕೊಟ್ಟಿದ್ದಾರೆ. ಅದೂ ಅಂತಿಂತ ಲುಕ್ಕಲ್ಲ. ಅಲ್ಲೊಂದು ನಿಗೂಢತೆಯಿದೆ. ವಿಚಿತ್ರ ಕುತೂಹಲವಿದೆ.
ಭಜರಂಗಿ 2ನಲ್ಲಿ ಶಿವಣ್ಣನ ಕಣ್ಣುಗಳನ್ನೇ ಹೈಲೈಟ್ ಮಾಡಿ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಅವರ ಎದುರಲ್ಲಿ ಥೇಟು ಚಾಣಕ್ಯನ ಗೆಟಪ್ಪಿನಲ್ಲಿರೋ ವಿಲನ್. ಅವರಿಬ್ಬರ ಮುಖಾಮುಖಿಯೇ ಚಿತ್ರದ ಪೋಸ್ಟರ್.
ಅದು ಚಾಣಕ್ಯ ಅಲ್ಲ, ಹೀರೋ ಮತ್ತು ವಿಲನ್ ಮುಖಾಮುಖಿ ಹಾಗೂ ಚಿತ್ರದ ಟ್ವಿಸ್ಟ್ ಎನ್ನುತ್ತಾರೆ ಹರ್ಷ. ಜಯಣ್ಣ ಭೋಗೇಂದ್ರ ಕಂಬೈನ್ಸ್‍ನಲ್ಲಿ ಬರುತ್ತಿರುವ ಚಿತ್ರದ ಬಹುಪಾಲು ಚಿತ್ರೀಕರಣ ಬಹುಪಾಲು ಮುಕ್ತಾಯವಾಗಿದೆ..