` ಕಿಚ್ಚನ ಜೊತೆ ಚುಟು ಚುಟು ಚೆಲುವೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ashika ranganath's guest appearance in kotigobba 3
Ashika Ranganath

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಹಾಡಿನಲ್ಲಿ ಚುಟು ಚುಟು ಖ್ಯಾತಿಯ ಅಶಿಕಾ ರಂಗನಾಥ್ ಕುಣಿದು ಕುಪ್ಪಳಿಸಿದ್ದಾರೆ. ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್‍ನಲ್ಲಿ ಅಶಿಕಾ ಹೆಜ್ಜೆ ಹಾಕಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಹಾಡಿಗಾಗಿಯೇ ಅದ್ಧೂರಿ ಸೆಟ್ ಹಾಕಲಾಗಿದೆ. ಇಲ್ಲಿ ನಡೆಯುತ್ತಿರುವ ಹಾಡಿಗೆ ರಾಜು ಸುಂದರಂ ನೃತ್ಯ ನಿರ್ದೇಶನವಿದೆ.

ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶಕ. ಈ ಹಾಡಿನ ಶೂಟಿಂಗ್ ಮುಗಿದರೆ, ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿಯಲಿದೆ. ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ಪ್ರಧಾನ ಪಾತ್ರಗಳಲ್ಲಿದ್ದಾರೆ.