2019ರ ರಾಜಕೀಯ ಸೆನ್ಸೇಷನ್ ಎಂಟಿಬಿ ನಾಗರಾಜ್. ಅನರ್ಹ ಶಾಸಕರ ಕ್ಷೇತ್ರದ ಚುನಾವಣೆ, ರಾಜಕೀಯದಲ್ಲಿ ಅತೀ ಹೆಚ್ಚು ಚರ್ಚೆಯಾದ ನಾಯಕ ಎಂಟಿಬಿ ನಾಗರಾಜ್. ಅಷ್ಟೇ ಅಲ್ಲ, ದೇಶದ ನಂ.1 ಶ್ರೀಮಂತ ಎಂಎಲ್‍ಎ ಆಗಿದ್ದ ಎಂಟಿಬಿ ನಾಗರಾಜ್, ಈಗ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಿನ ಕಬ್ಜ ಚಿತ್ರಕ್ಕೆ ಎಂಟಿಬಿ ನಾಗರಾಜ್ ನಿರ್ಮಾಪಕರಾಗಿದ್ದಾರೆ.
ಕಬ್ಜ ಚಿತ್ರ ಒಟ್ಟು 7 ಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕಾಗಿಯೇ ಒಂದೂವರೆ ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದ ಚಿತ್ರಕ್ಕೆ ಎಂಟಿಬಿ ನಾಗರಾಜ್ ಶಕ್ತಿಯೂ ಸಿಕ್ಕಿರೋದ್ರಿಂದ ಕಬ್ಜ ಚಿತ್ರದ ಅದ್ಧೂರಿತನ ಇನ್ನಷ್ಟು ಹೆಚ್ಚಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.
Related Articles :-