ಚರಣ್ ರಾಜ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬೇರೆ ಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚರಣ್ ಪುತ್ರ ತೇಜ್, ಭರತ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಹೀರೋ ಆಗಿ ಅಲ್ಲ, ಪ್ರಮುಖ ಪಾತ್ರದಲ್ಲಿ. ಅದೇ ಬಾಹುಬಲಿ ಪಾತ್ರ.
ನಮ್ಮ ಚಿತ್ರದ ಬಾಹುಬಲಿ ಪಾತ್ರಕ್ಕೆ ಕಟ್ಟುಮಸ್ತಾದ ಯುವಕನ ಹುಡುಕಾಟದಲ್ಲಿದ್ದೆ. ತೇಜ್ ಅವರನ್ನು ಕಂಡು ಖುಷಿಯಾಯಿತು. ನೇರವಾಗಿ ಚರಣ್ ರಾಜ್ ಅವರನ್ನೇ ಸಂಪರ್ಕಿಸಿದೆ. ಚರಣ್ ರಾಜ್ ಖುಷಿಯಿಂದ ಒಪ್ಪಿಕೊಂಡರು ಎಂದಿದ್ದಾರೆ ಮಂಜು ಮಾಂಡವ್ಯ.
ಮಂಜು ಮಾಂಡವ್ಯ ಅವರೇ ಚಿತ್ರದ ಹೀರೋ ಮತ್ತು ಡೈರೆಕ್ಟರ್. ಜನವರಿ 17ರಂದು ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಚಿಕ್ಕಣ್ಣ ಕೂಡಾ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.
ತಮ್ಮ ತಂದೆಗೆ ನೀಡಿದ ಪ್ರೋತ್ಸಾಹವನ್ನೇ ನನಗೂ ನೀಡಿ ಎಂದು ಮನವಿ ಮಾಡಿದ್ದಾರೆ ತೇಜ್. ಐಶ್ವರ್ಯಾ ಫಿಲಂಸ್ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣವಾಗಿದೆ.