ಐಫೋನ್‍ನಲ್ಲಿಯೇ ಸಿನಿಮಾ ಮಾಡಿದ್ದಾರಂತೆ ಎಂಬ ಅಚ್ಚರಿಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ ಡಿಂಗ. ಚಿತ್ರದ ನಿರ್ದೇಶಕ, ನಟ ಅಭಿಷೇಕ್ ಜೈನ್ ಅವರೇ ಹೇಳೋ ಪ್ರಕಾರ `ಇದು ಹಣವಿಲ್ಲದೆ ಮಾಡಿದ ಸಾಹಸವಲ್ಲ. ಹೊಸಬರಾಗಿ ಬಂದ ನಾವು ಏನಾದರೊಂದು ಹೊಸದಾಗಿ, ವಿಭಿನ್ನವಾಗಿ ಮಾಡಬೇಕಿತ್ತು. ಹೀಗಾಗಿ ಐಫೋನ್ ಶೂಟಿಂಗ್ ಆಯ್ಕೆ ಮಾಡಿಕೊಂಡೆವು. ಕ್ರಿಯೇಟಿವ್ ಆಗಿ ಗುರುತಿಸಿಕೊಳ್ಳುವುದಕ್ಕಾಗಿ ಐಫೋನ್ ಆಯ್ಕೆ ಮಾಡಿಕೊಂಡಿಡೆವು'
11 ನಿರ್ಮಾಪಕರು ಒಗ್ಗೂಡಿ ನಿರ್ಮಿಸಿರುವ ಚಿತ್ರಕ್ಕೆ ಆರವ್ ಗೌಡ ಹೀರೋ. ಅನುಷಾ ನಾಯಕಿ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಯೊಬ್ಬ, ತನ್ನ ಪ್ರೀತಿಯ ನಾಯಿಯನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಗೆ ಕೊಡಬೇಕು ಎಂದು ಹೊರಡುತ್ತಾನೆ. ಪರೀಕ್ಷಿಸುತ್ತಾನೆ. ಇದೇ ಕಥೆ. ಈ ಭಾವನಾತ್ಮಕ ಕಥೆ ಹೊಂದಿರುವ ಚಿತ್ರ ಇದೇ ತಿಂಗಳಲ್ಲಿ ತೆರೆಗೆ ಬರುತ್ತಿದೆ.