ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಛಾಯಾ ಸಿಂಗ್ ಅಭಿನಯದ ಹೊಸ ಸಿನಿಮಾ ಖಾಕಿ. ಪವರ್ ಆಫ್ ಕಾಮನ್ ಮ್ಯಾನ್ ಅನ್ನೋ ಟ್ಯಾಗ್‍ಲೈನ್ ಇರೋ ಚಿತ್ರದ ಟ್ರೇಲರ್, ಟ್ಯಾಗ್‍ಲೈನ್‍ಗೆ ತಕ್ಕಂತೆಯೇ ಇದೆ.
ಚಿತ್ರದಲ್ಲಿ ಚಿರು ಕೇಬಲ್ ಮ್ಯಾನ್ ಆಗಿದ್ದರೆ, ಛಾಯಾ ಸಿಂಗ್ ಪೊಲೀಸ್ ಆಫೀಸರ್. ತಾನ್ಯಾ ಹೋಪ್ ಜೊತೆಯಲ್ಲೊಂದು ಕ್ಯೂಟ್ ಲವ್ ಸ್ಟೋರಿಯೂ ಇದೆ. ನಿರ್ದೇಶಕ ಶಿವಮಣಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿಯೇ ಗಮನ ಸೆಳೆಯುತ್ತಿದೆ ಖಾಕಿ.
ತರುಣ್ ಶಿವಪ್ಪ ಬ್ಯಾನರ್‍ನಲ್ಲಿ ಬರುತ್ತಿರುವ ಸಿನಿಮಾಗೆ ನವೀನ್ ರೆಡ್ಡಿ ನಿರ್ದೇಶಕ. ದುಷ್ಟರ ವಿರುದ್ಧ ಹೋರಾಟಕ್ಕೆ ಸಾಮಾನ್ಯ ಜನರ ಸೈನ್ಯವನ್ನೇ ಕಟ್ಟುವ ನಾಯಕನ ಕಥೆಯೇ ಚಿತ್ರದ ಹೈಲೈಟ್.