ರಣಂ ಚಿತ್ರದ ಮೂಲಕ ತೆರೆ ಮೇಲೆ ಬರುತ್ತಿರುವ ಆ ದಿನಗಳು ಚೇತನ್, ಇದೇ ವೇಳೆ ವಿವಾಹ ಬಂಧನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದ ಚೇತನ್, ಈಗ ತಾವು ಪ್ರೀತಿಸಿ ಮದುವೆಯಾಗುತ್ತಿರುವ ಹುಡುಗಿಯನ್ನೂ ಪರಿಚಯಿಸಿದ್ದಾರೆ.
ಚೇತನ್ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘಾ. ಮಧ್ಯಪ್ರದೇಶದ ಹುಡುಗಿ. ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಪದವಿ ಮಾಡುತ್ತಿರುವ ಮೇಘಾ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರನ್ನೂ ಒಂದು ಮಾಡಿದ್ದೇ ಸಾಮಾಜಿಕ ಹೋರಾಟಗಳು ಮತ್ತು ಸಮಾಜ ಸೇವೆ.
ಈಗ ಇವರಿಬ್ಬರ ಮದುವೆ ಫೆಬ್ರವರಿ 2ರಂದು ನಡೆಯಲಿದ್ದು, ವಿನೋಬಾ ಬಾವೆ ಭವನದಲ್ಲಿ ಮದುವೆ ನಡೆಯಲಿದೆ. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಮತ್ತು ಸಾಮಾಜಿಕ ಹೋರಾಟಗಾರರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.