ಭರತ ಬಾಹುಬಲಿ ಟ್ರೇಲರ್ ನೋಡಿದವರಿಗೆ ಒಂದು ಅಚ್ಚರಿಯಾಗಿ ಕಾಣಿಸುವುದು ಫಾರಿನ್ ಚೆಲುವೆ. ವಿಶೇಷವೆಂದರೆ ಇಡೀ ಕಥೆಯ ಕೇಂದ್ರ ಬಿಂದುವೇ ಅವಳು. ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ಬರುವ ಆಕೆ, ಇಡೀ ಕಥೆಯ ಟರ್ನಿಂಗ್ ಪಾಯಿಂಟ್.
ಮಂಜು ಮಾಂಡವ್ಯ ನಿರ್ದೇಶನದ ಭರತ ಬಾಹುಬಲಿಯಲ್ಲಿ ಸಕ್ಕತ್ ಕಾಮಿಡಿ ಇದೆ. ಅದರಲ್ಲೂ ನನ್ನ ಮತ್ತು ಚಿಕ್ಕಣ್ಣ ಕಾಂಬಿನೇಷನ್ನಿನ ಕಾಮಿಡಿ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿವೆ ಎನ್ನುತ್ತಾರೆ ಮಂಜು.
ಮಾಸ್ಟರ್ ಪೀಸ್ ನಂತರ ಮಂಜು ಮಾಂಡವ್ಯ ನಿರ್ದೇಶಿಸಿರುವ ಚಿತ್ರವಿದು. ಚಿತ್ರಕ್ಕೆ ಅವರೇ ಹೀರೋ. ಜನವರಿ 17ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.