ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ರಿಲೀಸ್ ಡೇಟ್ ಪಕ್ಕಾ ಆಗಿದೆ ಎನ್ನುತ್ತಿದೆ ಗಾಂಧಿನಗರ. ಚಿತ್ರತಂಡ ಅಧಿಕೃತವಾಗಿ ಘೋಷಿಸಿಕೊಳ್ಳದೆ ಇದ್ದರೂ, ಏಪ್ರಿಲ್ 9ಕ್ಕೆ ರಾಬರ್ಟ್ ರಿಲೀಸ್ ಎನ್ನಲಾಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಪೋಸ್ಟರುಗಳಿಂದಲೇ ಭರ್ಜರಿ ಕುತೂಹಲ ಹುಟ್ಟಿಸಿರುವ ಚಿತ್ರ.
ರಾಬರ್ಟ್ ಚಿತ್ರ ಮೊದಲು ಅನೌನ್ಸ್ ಆಗಿದ್ದು, ಪೋಸ್ಟರ್ ರಿಲೀಸ್ ಆಗಿದ್ದೆಲ್ಲ ಕ್ರಿಸ್‍ಮಸ್ ವಿಶೇಷ ದಿನವೇ ರಿಲೀಸ್ ಆಗಿತ್ತು. ಇದೇ ವಿಶೇಷತೆ ಏಪ್ರಿಲ್ 9ಕ್ಕೂ ಇದೆ. ಏಪ್ರಿಲ್ 10ರಂದು ಗುಡ್ ಫ್ರೈಡೇ ಬರಲಿದೆ.
ದರ್ಶನ್ ನಾಯಕರಾಗಿರುವ ಚಿತ್ರದಲ್ಲಿ ಆಶಾ ಭಟ್ ನಾಯಕಿ. ವಿನೋದ್ ಪ್ರಭಾಕರ್ ಮತ್ತು ಸೋನಲ್ ಮಂಥೆರೋ ಪ್ರಮುಖ ಪಾತ್ರಗಳಲ್ಲಿರೋ ಚಿತ್ರವಿದು. ಅವರ ಪಾತ್ರ ಮತ್ತು ಕಥೆಯ ಬಗ್ಗೆ ನಿಗೂಢತೆ ಕಾಪಾಡಿಕೊಂಡೇ ಬಂದಿದ್ದಾರೆ ತರುಣ್ ಸುಧೀರ್. ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ ಈ ಕಾರಣಕ್ಕಾಗಿಯೇ ಭಾರಿ ಕುತೂಹಲ ಮೂಡಿಸಿದೆ.