ಕೆಜಿಎಫ್ ಚಾಪ್ಟರ್ 1 ಮುಗಿದು, ಚಾಪ್ಟರ್ 2 ಶುರುವಾಗುವ ನಡುವೆ ಯಶ್ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಬೇಕಿತ್ತು. ಚಿತ್ರಕ್ಕೆ ಮುಹೂರ್ತವೂ ಆಗಿತ್ತು. ಗಡ್ಡ, ಕೂದಲು ತೆಗೆಸಿಕೊಂಡು ಸ್ಮಾರ್ಟ್ ಆಗಿದ್ದ ಯಶ್, ಈ ಚಿತ್ರಕ್ಕೆ ಕೆಲವು ದಿನಗಳ ಚಿತ್ರೀಕರಣವನ್ನೂ ಮಾಡಿದ್ದರು. ಆದರೆ, ಚಾಪ್ಟರ್ 2 ಶುರುವಾದ ಕೂಡಲೇ ಈ ಚಿತ್ರಕ್ಕೆ ಬ್ರೇಕ್ ಬಿದ್ದಿತ್ತು. ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಮೈ ನೇಮ್ ಈಸ್ ಕಿರಾತಕ ಎಂದಿದ್ದರು ಯಶ್ ಮತ್ತು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ.
ಮುಂದೇನಾಯ್ತು..? ಆಗ ಸ್ಪಷ್ಟನೆ ಕೊಟ್ಟ ಬಳಿಕ ಚಿತ್ರತಂಡ ಕಂಪ್ಲೀಟ್ ಸೈಲೆಂಟ್ ಆಗಿತ್ತು. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಸೆಟ್ಟೇರಿರುವ ಮೈ ನೇಮ್ ಈಸ್ ಕಿರಾತಕ ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಜಾಹೀರಾತು ನೀಡಿದೆ.
ಅಕಸ್ಮಾತ್ ಚಿತ್ರ ನಿಂತಿದ್ದರೆ, ಜಾಹೀರಾತಿನ ಪ್ರಮೇಯವೇ ಬರುತ್ತಿರಲಿಲ್ಲ. ಜಾಹೀರಾತು ನೋಡಿದವರಿಗೆ ಅದು ಪಕ್ಕಾ ಆಗಿದೆ. ಅರ್ಥಾತ್, ಕೆಜಿಎಫ್ 2 ನಂತರ ಯಶ್ ಮತ್ತೊಮ್ಮೆ ಜಯಣ್ಣ ಭೋಗೇಂದ್ರ ಬ್ಯಾನರ್‍ನ ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ನಟಿಸಲಿದ್ದಾರೆ