ಅಭಿಮಾನಿಗಳೇ ನಮ್ಮನೆ ದೇವ್ರು ಎನ್ನುವವರು ಅಪ್ಪು. ಪುನೀತ್ ರಾಜ್ಕುಮಾರ್ ಕೂಡಾ ರಾಜ್ಕುಮಾರ್ ಅವರಂತೆಯೇ ಒಬ್ಬ ನಟ ಎನ್ನುವುದಕ್ಕಿಂತ ಹೆಚ್ಚಾಗಿ, ಎಷ್ಟೋ ಮನೆಗಳಲ್ಲಿ ಮನೆ ಮಗನೇ ಆಗಿಬಿಟ್ಟಿದ್ದಾರೆ. ಇಂತಹ ಅಪ್ಪುಗೆ ಉಡುಗೊರೆ ಕೊಡುವವರಿಗೇನೂ ಕಡಿಮೆಯಿಲ್ಲ. ಇದು ಅಂತಹ ಅಭಿಮಾನಿಯೊಬ್ಬನ ಕಥೆ.
ಇತ್ತೀಚೆಗೆ ಪುನೀತ್ ಅವರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬರು, ಬರಿಗೈಲಿ ಬಂದಿರಲಿಲ್ಲ. ಬದಲಿಗೆ ಡಾ.ರಾಜ್ ಅವರ ಪೆಂಡೆಂಟ್ ಇದ್ದ ಚಿನ್ನದ ಲಾಕೆಟ್ವೊಂದನ್ನು ಉಡುಗೊರೆಯಾಗಿ ತಂದಿದ್ದರು. ಅಭಿಮಾನಿ ಕೊಟ್ಟ ಲಾಕೆಟ್ನ್ನು ಕೊರಳಿಗೆ ಹಾಕಿಕೊಂಡು ಖುಷಿಪಟ್ಟ ಪುನೀತ್, ಬಳಿಕ ಆ ಲಾಕೆಟ್ನ್ನು ಅಭಿಮಾನಿಯ ಕೊರಳಿಗೇ ಹಾಕಿ ಕಳಿಸಿಕೊಟ್ಟಿದ್ದಾರೆ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನಮಗಿರಲಿ ಎಂದಿದ್ದಾರೆ.