ಒಂಭತ್ತನೇ ದಿಕ್ಕು, ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರವಿದು. ಲೂಸ್ ಮಾದ ಯೋಗಿ ಮತ್ತು ಆದಿತಿ ಪ್ರಭುದೇವ ನಟಿಸಿರುವ ಕ್ರೈಂ ಥ್ರಿಲ್ಲರ್. ಸತತ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಗೆಲ್ಲುತ್ತಿರುವ ದಯಾಳ್, ಮತ್ತೊಮ್ಮೆ ಅಂತಹುದೇ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರಿಗೆ ಚಾಲೆಂಜಿಂಗ್ ಸ್ಟಾರ್ ಸಪೋರ್ಟ್ ಸಿಕ್ಕಿದೆ.
ಚಿತ್ರಕ್ಕೆ ದರ್ಶನ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಆರಂಭ ಮತ್ತು ಅಂತ್ಯ, ಎರಡನ್ನೂ ವಿವರಿಸುವುದು ದರ್ಶನ್. ಸ್ಟಾರ್ ನಟ ಕೊಟ್ಟ ಬೆಂಬಲಕ್ಕೆ ದಯಾಳ್ ಪದ್ಮನಾಭನ್ ಧನ್ಯವಾದ ಅರ್ಪಿಸಿದ್ದಾರೆ. ಒಂಭತ್ತನೇ ದಿಕ್ಕು ಚಿತ್ರದ ಟೀಸರ್ ಜನವರಿ 15ರಂದು ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ.