ಕನ್ನಡ ಚಿತ್ರರಂಗದ ಕಾಮಿಡಿ ಸ್ಟಾರ್ ಚಿಕ್ಕಣ್ಣ. ಈಗಾಗಲೇ ಕೆಲವು ಚಿತ್ರಗಳಲ್ಲಿ ಲೀಡ್ ರೋಲ್‍ಗಳಲ್ಲಿ ನಟಿಸಿದ್ದರೂ, ಅಧಿಕೃತವಾಗಿ ಹೀರೋ ಆಗಿ ನಟಿಸಿಲ್ಲ. ಅಂಥಾದ್ದೊಂದು ಸಾಧನೆಗೆ ಹತ್ತಿರವಾಗಿದ್ದಾರೆ ಚಿಕ್ಕಣ್ಣ. ರಾಬರ್ಟ್ ಚಿತ್ರ ನಿರ್ಮಿಸುತ್ತಿರುವ ಉಮಾಪತಿ ನಿರ್ಮಾಣದ ಹೊಸ ಚಿತ್ರಕ್ಕೆ ಚಿಕ್ಕಣ್ಣ ಹೀರೋ. ಮಾಸ್ಟರ್ ಪೀಸ್ ಮತ್ತು ಭರತ ಬಾಹುಬಲಿ ನಿರ್ದೇಶಕ ಮಂಜು ಮಾಂಡವ್ಯ, ಚಿಕ್ಕಣ್ಣ ಹೀರೋ ಆಗುತ್ತಿರುವ ಚಿತ್ರಕ್ಕೆ ನಿರ್ದೇಶಕ.
`ಚಿತ್ರರಂಗಕ್ಕೆ ಬಂದು 10 ವರ್ಷಗಳಾದವು. ವೃತ್ತಿ ಜೀವನದಲ್ಲಿ ಒಂದು ಮೆಟ್ಟಿಲು ಮೇಲೇರಿದ್ದೇನೆ ಎನ್ನುವುದಷ್ಟೇ ಸಮಾಧಾನ. ಮುಂದಿನ ತಿಂಗಳಿಂದ ಶೂಟಿಂಗ್ ಶುರು ಎಂದಿದ್ದಾರೆ ಚಿಕ್ಕಣ್ಣ.
ಚಿಕ್ಕಣ್ಣ ಹೀರೋ ಆದರೆ, ದ್ವಾರಕೀಶ್, ಜಗ್ಗೇಶ್, ಕೋಮಲ್, ಶರಣ್ ಸಾಲಿಗೆ ಸೇರಲಿದ್ದಾರೆ.