ನಿರ್ದೇಶಕ ಸೂರಿ ಚಿತ್ರಗಳೆಂದರೇ ಹಾಗೆ.. ಏನೇ ಮನರಂಜನೆ ಎಂದುಕೊಂಡರೂ.. ಅಲ್ಲೊಂದು ತಲ್ಲಣ, ತಳಮಳ ಸೃಷ್ಟಿಸೋದ್ರಲ್ಲಿ ಅವರದ್ದು ಎತ್ತಿದ ಕೈ. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಟೀಸರ್ ಕೂಡಾ ಅಂಥದ್ದೇ ತಳಮಳ ಸೃಷ್ಟಿಸಿದೆ.
ವಿಚಿತ್ರ ಟೈಟಲ್ ಮೂಲಕ ಕುತೂಹಲ ಹುಟ್ಟಿಸಿದ್ದ ಸೂರಿ, ರಕ್ತದ ಕಥೆಯನ್ನೂ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ. ಅದು ಸೂರಿ ಸ್ಟೈಲ್. ಚಿತ್ರದ ಟೀಸರ್, ಮಾಫಿಯಾ ಮತ್ತು ಮನುಷ್ಯತ್ವದ ಸಂಬಂಧಗಳ ಕುರಿತು ಇರುವಂತಿದೆ. ನಟರಾಕ್ಷಸ ಧನಂಜಯ್ ಮತ್ತೊಮ್ಮೆ ಬೆಚ್ಚಿಬೀಳಿಸುತ್ತಾರೆ. ನಲ್ಲಿಯಲ್ಲಿ ತೊಟ್ಟಿಕ್ಕುವ ನೀರು, ನೆತ್ತರು, ಚಿಟ್ಟೆ, ಮಗು, ಸಮುದ್ರದ ದೃಶ್ಯಗಳ ಜೊತೆಯಲ್ಲೇ ಒಂದು ಭೀಕರತೆಯನ್ನೂ ತೆರೆದಿಡುತ್ತಾರೆ ಸೂರಿ. ಡಾಲಿಗೆ ಜೋಡಿಯಾಗಿ ನಿವೇದಿತಾ ಇದ್ದರೆ, ಚರಣ್ ರಾಜ್ ಸಂಗೀತ ಎದೆ ಬಡಿತ ಹೆಚ್ಚಿಸುತ್ತದೆ.