ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಗಿನ್ನಿಸ್ ದಾಖಲೆ ಸೃಷ್ಟಿಸಿದೆ. 34ನೇ ಹುಟ್ಟುಹಬ್ಬ ಆಚರಿಸಿದ ಯಶ್ ಈ ಬಾರಿ ಅಭಿಮಾನಿಗಳ ಅಭಿಮಾನದಿಂದ ಹೊಸ ದಾಖಲೆ ಬರೆದಿದ್ದಾರೆ. ಯಶ್ ಅಭಿಮಾನಿಗಳು 5000 ಕೇಕ್ ತಯಾರಿಸಿದ್ದರು.
ವೇಣು ಎಂಬ ಅಭಿಮಾನಿ ಕೇಕ್‍ನ್ನು ಯಶ್ ಅವರಿಗಾಗಿ ತಯಾರು ಮಾಡಿಸಿದ್ದರು. ಇದು ಈಗ ಗಿನ್ನಿಸ್ ದಾಖಲೆ ಸೇರಿದೆ. 72 ಅಡಿ ಉದ್ದ, 40 ಅಡಿ ಸುತ್ತಳತೆಯ 5000 ಕೆಜಿ ಕೇಕ್ ಗಿನ್ನಿಸ್ ದಾಖಲೆ ಸೇರಿದೆ. ಪವನ್ ಸೋಲಂಕಿ ವರ್ಡ್ ರೆಕಾರ್ಡ್ ಸಂಸ್ಥೆಯ ಅಧಿಕಾರಿ ಇದನ್ನು ದೃಢೀಕರಿಸಿದ್ದಾರೆ.
ಕೆಲವೇ ದಿನಗಳಲ್ಲಿ ಇದು ಗಿನ್ನಿಸ್ ದಾಖಲೆಯ ಅಧಿಕೃತ ಪುಸ್ತಕದಲ್ಲಿ ದಾಖಲೆಯಾಗಿ ಸೇರಿಕೊಳ್ಳಲಿದೆ. ಯಶ್ ಹುಟ್ಟುಹಬ್ಬಕ್ಕಾಗಿ ಬೇರೆ ರಾಜ್ಯಗಳಿಂದಲೂ ಅಭಿಮಾನಿಗಳು ಬಂದಿದ್ದುದು ವಿಶೇಷವಾಗಿತ್ತು. ಮಧ್ಯರಾತ್ರಿ ಸಂಭ್ರಮಕ್ಕೆ ಯಶ್ ಅಭಿಮಾನಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.