ದಬಾಂಗ್ 3ಯಲ್ಲಿ ಒಟ್ಟಿಗೇ ನಟಿಸಿದ್ದ ಸಲ್ಮಾನ್ ಮತ್ತು ಸುದೀಪ್ ಈಗ ಗೆಳೆಯರೂ ಆಗಿಬಿಟ್ಟಿದ್ದಾರೆ. ದಬಾಂಗ್ 3ಯಲ್ಲಿ ವಿಲನ್ ಬಲ್ಲಿ ಸಿಂಗ್ ಆಗಿ ಗೆದ್ದಿದ್ದ ಕಿಚ್ಚ, ಸಲ್ಮಾನ್ ಹೃದಯವನ್ನೂ ಗೆದ್ದಿದ್ದಾರೆ. ಸುದೀಪ್ ಅವರಿಗೆ ಸಲ್ಮಾನ್ ಖಾನ್ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ಸುದೀಪ್‌ಗೆ ಈ ಬಾರಿ ಸಲ್ಮಾನ್ ಬಿಎಂಡಬ್ಲ್ಯೂ ಎಂ5 ಸಿರೀಸ್‌ನ ಕಾರನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆ ಕಾರು ಕೊಡುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಲ್ಮಾನ್, ಸ್ವತಃ ಸುದೀಪ್ ಅವರ ಮನೆಗೆ ಹೋಗಿ ಉಡುಗೊರೆ ಕೊಟ್ಟು ಖುಷಿ ಪಟ್ಟಿದ್ದಾರೆ. ಅಂದಹಾಗೆ ಈ ಕಾರಿನ ಮಾರುಕಟ್ಟೆ ಮೌಲ್ಯ ಒಂದೂವರೆ ಕೋಟಿಗೂ ಹೆಚ್ಚು.
ಅಫ್ಕೋರ್ಸ್.. ಅವರಿಬ್ಬರ ಸ್ನೇಹಕ್ಕೆ ಎಷ್ಟು ಕೋಟಿ ಕೊಟ್ಟರೂ ಬೆಲೆ ಕಟ್ಟಲು ಸಾಧ್ಯವಿಲ್ಲ, ಆ ಮಾತು ಬೇರೆ. ಒಳ್ಳೆಯತನಕ್ಕೆ ಒಳ್ಳೆಯತನವೇ ಉಡುಗೊರೆ. ಒಳ್ಳೆಯ ಹೃದಯಕ್ಕೆ ಒಳ್ಳೆಯ ಹೃದಯವೇ ಉಡುಗೊರೆ. ಕಾರ್ ಸಮೇತ ಅಚ್ಚರಿ ಕೊಟ್ಟ ಸಲ್ಮಾನ್ ಖಾನ್ಗೆ ನನ್ನ ಮತ್ತು ನನ್ನ ಕುಟುಂಬದಿಂದ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ ಕಿಚ್ಚ.