ರಶ್ಮಿಕಾ ಮಂದಣ್ಣ, ಸದ್ಯಕ್ಕೆ ಸೌಥ್ ಇಂಡಿಯಾ ಕ್ರಶ್. ಇಂತಹ ರಶ್ಮಿಕಾ ಮಂದಣ್ಣ, ಈಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಸಂಕ್ರಾಂತಿಗೆ ರಿಲೀಸ್. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಹಿ ಈಸ್ ಸ್ವೀಟ್ ಹಾಡಿನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ರಶ್ಮಿಕಾ. ಈ ರಶ್ಮಿಕಾ ಮಂದಣ್ಣ ಅವರನ್ನು ರಶ್ಮಿಕಾ ಮಂಡೂಕ ಎಂದು ಕರೆದವರು ಬೇರೆ ಯಾರೂ ಅಲ್ಲ, ಮೆಗಾಸ್ಟಾರ್ ಚಿರಂಜೀವಿ.
ಸರಿಲೇರು ನೀಕೆವ್ವರು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿರಂಜೀವಿ, ರಶ್ಮಿಕಾ ಮಂದಣ್ಣ ಅವರನ್ನು ಹಲವು ಬಾರಿ ರಶ್ಮಿಕಾ ಮಂಡೂಕ ಎಂದೇ ಉಚ್ಚರಿಸಿದ್ರು. ಅದು ತಪ್ಪು ಎನ್ನುವುದು ಕಾರ್ಯಕ್ರಮ ಮುಗಿದ ನಂತರವೂ ಅವರ ಗಮನಕ್ಕೆ ಬರಲಿಲ್ಲ.
ಹಾಗಂತ ರಶ್ಮಿಕಾ ಮಂದಣ್ಣ, ಚಿರಂಜೀವಿಗೆ ಹೊಸಬರಲ್ಲ. ರಶ್ಮಿಕಾ ಅವರ ಚಲೋ, ಗೀತ ಗೋವಿಂದಂ ಚಿತ್ರದ ಆಡಿಯೋ ರಿಲೀಸ್ನಲ್ಲೂ ರಶ್ಮಿಕಾ ಮಂದಣ್ಣ ಪರಿಚಿತರು. ಗೀತ ಗೋವಿಂದಂ, ಚಿರಂಜೀವಿ ಕುಟುಂಬದ ಬ್ಯಾನರ್ ಸಿನಿಮಾ. ಇಷ್ಟಿದ್ದರೂ ಹೆಸರು ತಪ್ಪಿದ್ದೇಕೆ..? ಗೊತ್ತಿಲ್ಲ.
ಅಂದಹಾಗೆ ಮಂಡೂಕ ಎಂದರೆ ಕಪ್ಪೆ ಎಂದರ್ಥ. ರಾವಣನ ಪತ್ನಿ ಮಂಡೋದರಿ ಗೊತ್ತಿರಲೇಬೇಕಲ್ಲ, ಮಂಡೋದರಿ ಎಂದರೆ ಕಪ್ಪೆಯ ಉದರದಿಂದ ಜನಿಸಿದವಳು ಎಂದರ್ಥ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ, ರಶ್ಮಿಕಾ ಮಂಡೂಕ ಆಗಿಬಿಟ್ಟಿದ್ದಾರೆ.