ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅಭಿನಯದ ಜೆಂಟಲ್ಮನ್ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ ಮಾಡಿದ್ದು ಪುನೀತ್ ಮತ್ತು ಧ್ರುವ ಸರ್ಜಾ ಎನ್ನುವುದೇ ವಿಶೇಷ. ಇನ್ನೂ ವಿಶೇಷವೆಂದರೆ ಪ್ರಜ್ವಲ್ ಹೇಳಿದ ಮಾತು. ‘ನನಗೆ ಸಿನಿಮಾ ರಂಗಕ್ಕೆ ಬರಲು ಸ್ಪೂರ್ತಿಯೇ ಪುನೀತ್ ಮತ್ತು ವಯಸ್ಸಿನಲ್ಲಿ ಚಿಕ್ಕವನಾದರೂ ಧ್ರುವ ನನಗೆ ಸದಾ ಪ್ರೇರಣೆ ’ ಎಂದರು ಪ್ರಜ್ವಲ್.
ಜಡೇಶ್ ಕುಮಾರ್ ನಿರ್ದೇಶನದ ಜೆಂಟಲ್ಮ್ಯಾನ್ ಟ್ರೇಲರ್ ಟೆಕ್ನಿಕಲ್ ಸಖತ್ತಾಗಿದೆ. ಕ್ಯಾಮೆರಾ, ಮ್ಯೂಸಿಕ್, ಡೈಲಾಗ್ ಎಲ್ಲವೂ ಅದ್ಭುತ ಕ್ವಾಲಿಟಿಯಲ್ಲಿದೆ ಎಂದು ಮೆಚ್ಚಿಕೊಂಡರು ಪುನೀತ್. ಅಫ್ಕೋರ್ಸ್.. ಚಿತ್ರದ ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂದು ಕುತೂಹಲ ಹುಟ್ಟಿಸುವಂತಿದೆ ಟ್ರೇಲರ್. ಹೆಣ್ಣು ಮಕ್ಕಳ ಕಿಡ್ನಾಪ್ ಕಥೆ, ಒಂದು ಕ್ಯೂಟ್ ಲವ್ ಸ್ಟೋರಿ ಮತ್ತು ಇವೆಲ್ಲದರ ಮಧ್ಯೆ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಲ್ಲಿ ಒದ್ದಾಡುವ ಯುವಕನ ಹೋರಾಟ.
ಗುರುದೇಶ ಪಾಂಡೆ ನಿರ್ಮಾಣದ ಜೆಂಟಲ್ಮ್ಯಾನ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹೀರೋಯಿನ್. ಸಿನಿಮಾ ಇದೇ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.