` ಕಿರಿಕ್ ಪಾರ್ಟಿ ರೆಕಾರ್ಡ್ ಮೊದಲ ವಾರಕ್ಕೇ ಮುರಿದ ನಾರಾಯಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
avane srimannarayana breaks kirik party record
Avane Srimannarayana Movie Image

ಕಿರಿಕ್ ಪಾರ್ಟಿ, ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಚಿತ್ರ ರಿಲೀಸ್ ಆದ 3 ವರ್ಷಗಳ ನಂತರ ತೆರೆಗೆ ಬಂದ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಬಾಕ್ಸಾಫೀಸ್ ದಾಖಲೆ ಮುರಿದಿದೆ. 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಕಿರಿಕ್‌ ಪಾರ್ಟಿ ಸಿನಿಮಾಗಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಥಿಯೇಟರ್ ವಿಸಿಟ್ ನಂತರ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಚಿತ್ರ ಮಾಸ್ ಪ್ರೇಕ್ಷಕರ ಜತೆಗೆ, ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆದಿದೆ ಎಂದು ತಿಳಿಸಿದ್ದಾರೆ. ವಿಜಯಯಾತ್ರೆ ನಡೆಸುತ್ತಿರುವ ರಕ್ಷಿತ್ ಶೆಟ್ಟಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ ಎಂದು ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ, ವಿಮರ್ಶೆ ನೋಡಿ ಹಾಗೂ ಸಿನಿಮಾ ನೋಡಿದವರ ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾಗೆ ಜನ ಬರುವ ಸಂಖ್ಯೆ ಹೆಚ್ಚುತ್ತಿದೆ ಎಂಬ ಖುಷಿಯನ್ನೂ ಹಂಚಿಕೊಂಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ. ಸಚಿನ್ ರವಿ ನಿರ್ದೇಶಕ. ಒಟ್ಟಾರೆ ಇಡೀ ಚಿತ್ರತಂಡ ಸಂಭ್ರಮ ಯಾತ್ರೆಯಲ್ಲಿದೆ.