ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್ನಿನ ಕಬ್ಜ ಚಿತ್ರದ ತೆಲುಗು ವರ್ಷನ್ ಶೂಟಿಂಗ್ ಶುರುವಾಗಿದೆ. ಅದೂ ಅಂತಿಂಥಾ ಆರಂಭವಲ್ಲ. ಅದ್ದೂರಿ.. ಭರ್ಜರಿ ಆರಂಭ. ಕಾರಣ ಇಷ್ಟೆ, ಕಬ್ಜ ಚಿತ್ರದ ಮೊದಲ ದೃಶ್ಯಕ್ಕೆ ಪ್ರಸಾದ್ ಲ್ಯಾಬ್ಸ್‍ನ ರಮೇಶ್ ಪ್ರಸಾದ್ ಕ್ಲಾಪ್ ಮಾಡಿದ್ರೆ, ಸಮರಸಿಂಹ ರೆಡ್ಡಿಯ ಸೃಷ್ಟಿಕರ್ತ ಬಿ.ಗೋಪಾಲ್ ಮೊದಲ ದೃಶ್ಯಕ್ಕೆ ಡೈರೆಕ್ಷನ್ ಹೇಳಿದ್ದಾರೆ. ಲಗಡಪಾಟಿ ಶ್ರೀಧರ್ ಸ್ವಿಚ್ ಆನ್ ಮಾಡಿದ್ದಾರೆ.
ರಾಮಾನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿದ್ದು, ಅದ್ಧೂರಿಯಾಗಿ ನೆರವೇರಿದೆ. ತೆಲುಗು ವರ್ಷನ್ ತೆಲುಗಿನಲ್ಲಿಯೇ ಶೂಟಿಂಗ್ ಆಗುತ್ತಿದೆ. ಡಬ್ಬಿಂಗ್ ಅಲ್ಲ. ತೆಲುಗಿನಲ್ಲಿ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಕಬ್ಜ ಚಿತ್ರ ಕನ್ನಡ, ತೆಲುಗು ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.