ಮಠ, ಜಗ್ಗೇಶ್ ವೃತ್ತಿ ಬದುಕಿನ ಮೈಲುಗಲ್ಲಾದ ಸಿನಿಮಾ. ಗುರುಪ್ರಸಾದ್ ನಿರ್ದೇಶನದ ಚೊಚ್ಚಲ ಚಿತ್ರ ಚಿತ್ರರಂಗದ ಹಾದಿಯನ್ನೇ ಬದಲಿಸಿದ್ದ ಚಿತ್ರ. ಆದರೆ, ಈಗ ಮಠ ಹೆಸರಿನಲ್ಲೇ ಇನ್ನೊಂದು ಸಿನಿಮಾ ಬರುತ್ತಿದೆ. ಆದರೆ, ಈ ಮಠದಲ್ಲಿ ಜಗ್ಗೇಶ್ ಇಲ್ಲ. ಗುರುಪ್ರಸಾದ್ ಕೂಡಾ ಇಲ್ಲ.
ರವೀಂದ್ರ ವೆಂಕಿ ಎನ್ನುವವರು ಈ ಮಠ ಚಿತ್ರದ ನಿರ್ದೇಶಕ. ಸಂತೋಷ್ ದಾವಣಗೆರೆ ಈ ಸಿನಿಮಾದ ನಾಯಕ. ಇವರ ಜೊತೆಗೆ ಸಾಧುಕೋಕಿಲ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್, ರಾಜು ತಾಳಿಕೋಟೆ ನಟಿಸುತ್ತಿದ್ದಾರೆ. ವಿ ಆರ್ ಕಂಬೈನ್ಸ್ ಬ್ಯಾನರ್ ನಲ್ಲಿ ‘ಮಠ’ ನಿರ್ಮಾಣವಾಗುತ್ತಿದೆ.