ರೆಮೋ, ಪವನ್ ಒಡೆಯರ್ ನಿರ್ದೇಶನದ ಹೊಸ ಸಿನಿಮಾ. ಇಶಾನ್ ಮತ್ತು ಅಶಿಕಾ ರಂಗನಾಥ್ ಪ್ರಧಾನ ಪಾತ್ರದಲ್ಲಿರುವ ಚಿತ್ರ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರೋ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಚಿತ್ರದ ಹೀರೋ ಒಬ್ಬ ರಾಕ್‍ಸ್ಟಾರ್ ಎನ್ನುವ ಗುಟ್ಟು ಹೊರಬಿದ್ದಿದೆ.
ಲೈವ್ ಕನ್ಸರ್ಟ್ ಮಾದರಿಯ ಸೀನ್ ಮತ್ತು ಹಾಡಿನ ಶೂಟಿಂಗ್ ನಡೆಯಬೇಕಿದ್ದು, ಈಗಾಗಲೇ ಚಿತ್ರದ 80% ಶೂಟಿಂಗ್ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ ಪವನ್ ಒಡೆಯರ್.
ಸಿ.ಆರ್.ಮನೋಹರ್ ನಿರ್ಮಾಣದ ರೆಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಅಂದಹಾಗೆ ಚಿತ್ರದಲ್ಲಿ ಶರತ್ ಕುಮಾರ್ ಕೂಡಾ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಧು ಎಂಟ್ರಿ ಕೊಟ್ಟಿದ್ದಾರೆ. ರನ್ನ, ಸೀತಾರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ ನಂತರ ಮಧು ನಟಿಸುತ್ತಿರುವ ಚಿತ್ರವಿದು.