ರಾಜಾಹುಲಿ ಖ್ಯಾತಿಯ ಗುರು ದೇಶಪಾಂಡೆ, ಒಂದು ಕಡೆ ನಿರ್ದೇಶನ, ಮತ್ತೊಂದು ಕಡೆ ನಿರ್ಮಾಣದಲ್ಲಿ ತೊಡಗಿಸಿಕೊಂಡೇ ಜಿ ಅಕಾಡೆಮಿ ಅನ್ನೋ ಸಂಸ್ಥೆಯನ್ನೂ ಹುಟ್ಟುಹಾಕಿದ್ದಾರೆ. ಇದು ಒಂದು ಪಕ್ಕಾ ಸಿನಿಮಾ ಸ್ಕೂಲ್. ಸಿನಿಮಾ ರಂಗಕ್ಕೆ ಬರಬೇಕು ಎಂದುಕೊಳ್ಳುವವರಿಗೆ ಮಾರ್ಗದರ್ಶನ, ಶಿಕ್ಣ ನೀಡುವ ಸಂಸ್ಥೆ.
ಪಕ್ಕಾ ಶಿಕ್ಷಣ ಸಂಸ್ಥೆಯಂತೇ ಕೆಲಸ ಮಾಡುತ್ತಿದೆ ಜಿ ಅಕಾಡೆಮಿ. ಸ್ವತಃ ಗುರುದೇಶಪಾಂಡೆ ಈ ಸಂಸ್ಥೆಯಲ್ಲಿ ಮಾರ್ಗದರ್ಶನ ಮಾಡ್ತಾರೆ. ಸೇರುವ ಪ್ರತಿ ಬ್ಯಾಚ್ ವಿದ್ಯಾರ್ಥಿಗಳೂ ಒಂದೊಂದು ಶಾರ್ಟ್ ಫಿಲ್ಮ್ ಮಾಡಬೇಕು. ಅಂದಹಾಗೆ ಈ ಅಕಾಡೆಮಿಗೆ ಈಗ ಸುನಿಲ್ ಕುಮಾರ್ ದೇಸಾಯಿ, ಚೂರಿಕಟ್ಟೆ ರಾಘು ಮೊದಲಾದ ಸ್ಟಾರ್ ನಿರ್ದೇಶಕರ ಎಂಟ್ರಿಯೂ ಆಗಿದೆ.