ಭೂಮಿ ಮೇಲಿರೋ ಯಾವ ಕೋಳಿ ಕೂಗಿದ್ರೂ ಇವನು ಎದ್ದೇಳಲ್ಲ.. ಇವನ ಹೆಸರೇ ಕುಂಭಕರ್ಣ...
ಸತತವಾಗಿ 3 ಗಂಟೆ 49 ಸೆಕೆಂಡು ಸ್ಟಡಿ ಮಾಡಿದ ಪ್ರತಿಯೊಬ್ಬ ಕಾಲೇಜ್ ಸ್ಟೂಡೆಂಟೂ... ಮುಂದಿರೋದು ಗೊರಕೆ ಹೊಡೆಯುತ್ತಿರೋ ಪ್ರಜ್ವಲ್ ಫೋಟೋ..
ಸಾಂಗ್ಲಿಯಾನ ಚಿತ್ರದಲ್ಲಿ ನಿದ್ದೆ ಮಾಡೋ ವಿಲನ್ `ಕುಂಬಿ' ಆಗಿ ಅಬ್ಬರಿಸಿದ್ದ ಸುಧೀರ್, ಅಲ್ಲಿ ಸ್ವರ್ಗದಲ್ಲಿ ಕುಳಿತು ಟೆನ್ಷನ್ ಆಗಿ ಜಂಟಲ್‍ಮನ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಇಂಥವು.. ಒಂದಲ್ಲ..ಎರಡಲ್ಲ.. ಹತ್ತಲ್ಲ.. ಹಲವಾರಿವೆ. ಇವೆಲ್ಲವೂ ಜೆಂಟಲ್‍ಮನ್ ಚಿತ್ರದ ಮೈಮ್ಸ್‍ಗಳು. ಏಕೆಂದರೆ, ಈ ಚಿತ್ರದ ಹೀರೋ ಭರತ್ ಅಲಿಯಾಸ್ ಪ್ರಜ್ವಲ್ ದೇವರಾಜ್‍ಗೆ ದಿನಕ್ಕೆ 18 ಗಂಟೆ ಮಲಗೋ ಕಾಯಿಲೆ. ಉಳಿದಿರೋ ಜಸ್ಟ್ 6 ಗಂಟೆ ಟೈಮಲ್ಲಿ ಅವನು ಕೆಲಸ ಮಾಡಬೇಕು, ಲವ್ ಮಾಡಬೇಕು, ವಿಲನ್‍ಗಳ ಜೊತೆ ಫೈಟ್ ಮಾಡಬೇಕು. ನಿತ್ಯ ಕರ್ಮಗಳನ್ನೂ ಮುಗಿಸಬೇಕು.
ಇಂಥಾದ್ದೊಂದು ಸ್ಪೆಷಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಜಡೇಶ್. ಸ್ಲೀಪಿಂಗ್ ಸಿಂಡ್ರೋಮ್ ಹುಡುಗನ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಜಡೇಶ್ ಕುಮಾರ್. ಚಿತ್ರದ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ. ಹೊಸ ಹೊಸ ಹುಡುಗರ ವಿಭಿನ್ನ ಪ್ರಯತ್ನಗಳಿಗೆ ಸಪೋರ್ಟ್ ಕೊಡುತ್ತಿದ್ದಾರೆ ಗುರು ದೇಶಪಾಂಡೆ.
ಅಂದಹಾಗೆ ವಿಷಯ ಇದಲ್ಲ. ಇಲ್ಲೊಂದು ಸ್ಪರ್ಧೆಯಿದೆ. ನೀವು ಒಂದು ಕೆಲಸ ಮಾಡಬೇಕು. ನಿದ್ದೆ ಮಾಡುತ್ತಿರುವವರ ವಿಡಿಯೋ ಶೂಟ್ ಮಾಡಬೇಕು. ಅವರು ನಿದ್ದೆಯಲ್ಲಿ ಮಾಡಿಕೊಳ್ಳೋ ಎಡವಟ್ಟುಗಳನ್ನು ಶೂಟ್ ಮಾಡಿ ಜೆಂಟಲ್‍ಮನ್ ಟೀಂಗೆ ಕಳಿಸಿಕೊಡಬೇಕು. ಅಂದ್ರೆ ಪ್ರಜ್ವಲ್ ದೇವರಾಜ್ ಅವರಿಗೆ ಟ್ಯಾಗ್ ಮಾಡಿ. ಮುಂದಾ.. ಸಿನಿಮಾ ರಿಲೀಸ್ ಆಗುವ ಮೊದಲೇ ನೀವು ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ನೋಡಬಹುದು.