ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್, ಒಳ್ಳೆಯ ಕಥೆ ಇರುವ ಸಿನಿಮಾಗಳಿಗೆ ಹೆಸರಾದವರು. ಒಂದಲ್ಲ ಎರಡಲ್ಲ ಚಿತ್ರದ ಮೂಲಕವೂ ಗಮನ ಸೆಳೆದವರು. ಪ್ರೇಕ್ಷಕರಿಗೆ ವ್ಹಾವ್ ಎನಿಸುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಸತ್ಯಪ್ರಕಾಶ್, ಈಗ ಪುನೀತ್ ರಾಜ್‍ಕುಮಾರ್ ಅವರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.
ಕಥೆಯ ಒನ್‍ಲೈನ್ ಕೇಳಿಯೇ ಥ್ರಿಲ್ ಆಗಿದ್ದ ಪುನೀತ್, ಕಥೆಯ ಮೇಲೆ ವರ್ಕ್ ಮಾಡುವಂತೆ ಹೇಳಿದ್ದರಂತೆ. ಎಲ್ಲವೂ ಫೈನಲ್ ಹಂತಕ್ಕೆ ಬಂದಿದೆ. ಪುನೀತ್ ಜೊತೆ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ. ಅವರು ಮತ್ತು ಅವರ ಅಭಿಮಾನಿಗಳಿಗೆ ಇಷ್ಟವಾಗುವಂಥೆ ಕಥೆ ಬರೆದಿದ್ದೇನೆ ಎಂದಿರುವ ಸತ್ಯಪ್ರಕಾಶ್ ಶೀಘ್ರದಲ್ಲೇ ಎಲ್ಲ ಮಾಹಿತಿಯನ್ನೂ ನೀಡಲಿದ್ದಾರಂತೆ.