ಜನವರಿ 8. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೊಂದು ದಾಖಲೆ ಬರೆಯುತ್ತಿರುವ ಯಶ್, ಈಗ ಮತ್ತೊಂದು ವಿಶ್ವದಾಖಲೆ ಬರೆಯಲು ರೆಡಿಯಾಗಿದ್ದಾರೆ. ಆದರೆ, ಈ ಬಾರಿ ಯಶ್ ಅವರಿಗೆ ದಾಖಲೆ ಬರೆಯುತ್ತಿರುವುದು ಅವರ ಅಭಿಮಾನಿಗಳು.
ಯಶ್ ಅವರ ಡೈ ಹಾರ್ಡ್ ಫ್ಯಾನ್ ವೇಣು ಗೌಡ, ತಮ್ಮ ಪ್ರೀತಿಯ ರಾಮಾಚಾರಿ ಹುಟ್ಟುಹಬ್ಬಕ್ಕೆ 5 ಸಾವಿರ ಕೆಜಿ ಕೇಕ್ ಮಾಡಿಸುತ್ತಿದ್ದಾರೆ. ಇದು ಪ್ರಪಂಚದ ಅತಿ ದೊಡ್ಡ ಕೇಕ್ ಆಗಲಿದೆ ಎನ್ನುವುದು ವಿಶೇಷ. ಬೆಂಗಳುರಿನ ನಾಯಂಡಹಳ್ಳಿ ಬಳಿ ಪಂತರಪಾಳ್ಯ ಸಮೀಪ ನಂದಿ ಲಿಂಕ್ಸ್ ಗ್ರೌಂಡ್ ಇದೆ. ಆ ಮೈದಾನದಲ್ಲಿ ಯಶ್ ಹುಟ್ಟುಹಬ್ಬ ನೆರವೇರಲಿದೆ. ಈ ಮೂಲಕ ಅತಿ ದೊಡ್ಡ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ವಿಶ್ವದ ಮೊದಲ ಸೆಲಬ್ರಿಟಿಯಾಗಲಿದ್ದಾರೆ ಯಶ್.
ಅಂದಹಾಗೆ ಹುಟ್ಟುಹಬ್ಬ ಇರೋದು ಜನವರಿ 8ಕ್ಕೆ. ಆದರೆ, ಅಭಿಮಾನಿಗಳು ಜನವರಿ 7ರಂದು ಮಧ್ಯರಾತ್ರಿ 12ಕ್ಕೆ ಯಶ್ ಹುಟ್ಟುಹಬ್ಬ ಆಚರಿಸಲಿದ್ದಾರೆ.