ಆ ದಿನಗಳು ಚೇತನ್ ಎಂದೇ ಕನ್ನಡಿಗರಿಗೆ ಚಿರಪರಿಚಿತವಾಗಿರುವ ನಟ ಚೇತನ್, ಈಗ ರಣಂ ಚಿತ್ರದಲ್ಲಿ ನಟಿಸಿದ್ದಾರೆ. ರಣಂ ರಿಲೀಸ್ ಆಗಲು ಸಿದ್ಧವಾಗಿ ನಿಂತಿದೆ. ಇದೇ ವೇಳೆ ಚೇತನ್, ತಮ್ಮ ಮದುವೆ ಮತ್ತು ಪ್ರೀತಿಯ ಕಥೆ ಹೇಳಿಕೊಂಡಿದ್ದಾರೆ.
ಚೇತನ್ ಕೈ ಹಿಡಿಯಲಿರುವ ಹುಡುಗಿ ಕನ್ನಡತಿಯಲ್ಲ. ಉತ್ತರ ಭಾರತದವರು. ಆಕೆಗೆ ಸ್ವತಃ ಚೇತನ್ ಕನ್ನಡ ಕಲಿಸುತ್ತಿದ್ದಾರಂತೆ. ಆಕೆಯನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಕರೆತರುತ್ತೇನೆ ಎಂದು ಭರವಸೆ ನೀಡುವ ಚೇತನ್, ಅನಾಥಾಶ್ರಮದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳೋ ಯೋಚನೆಯಲ್ಲಿದ್ದಾರೆ.
ಇತ್ತ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಚೇತನ್, ಸದ್ಯಕ್ಕೆ ರಣಂ ಪ್ರಚಾರದಲ್ಲಿ ಬ್ಯುಸಿ. ಚೇತನ್ ಜೊತೆ ಚಿರಂಜೀವಿ ಸರ್ಜಾ ಕೂಡಾ ನಟಿಸಿದ್ದು, ವರಲಕ್ಷ್ಮೀ ಶರತ್ಕುಮಾರ್ ನಾಯಕಿ. ಕನಕಪುರ ಶ್ರೀನಿವಾಸ್ ನಿರ್ಮಾಪಕ. ವಿ.ಸಮುದ್ರ ನಿರ್ದೇಶನದ ಚಿತ್ರದ ಆಡಿಯೋ ಇತ್ತೀಚೆಗೆ ರಿಲೀಸ್ ಆಗಿ ಕೇಳುಗರ ಮನ ಸೆಳೆದಿದೆ.