ಕಿರುತೆರೆಯ ಸ್ಟಾರ್ ನಿರ್ದೇಶಕರೆಂದೇ ಹೆಸರಾಗಿದ್ದ ಸುನಿಲ್ ಪುರಾಣಿಕ್ ಹೊಸ ಜವಾಬ್ದಾರಿ, ಹೊಸ ಹುದ್ದೆ ವಹಿಸಿಕೊಂಡಿದ್ದಾರೆ. ಇಂದಿನಿಂದ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ.
50ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶಿಸಿರುವ ಸುನಿಲ್ ಪುರಾಣಿಕ್, ನಟರಾಗಿಯೂ ಕನ್ನಡಿಗರಿಗೆ ಚಿರಪರಿಚಿತ ಮುಖ. ಗುರುಕುಲ ಎಂಬ ಚಿತ್ರದ ನಿರ್ದೇಶಕರೂ ಹೌದು. ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಬಣ್ಣ ಹಚ್ಚಿರುವ ಸುನಿಲ್ ಪುರಾಣಿಕ್ ಅವರಿಗೆ ಹೊಸ ವರ್ಷದ ದಿನ ಯಡಿಯೂರಪ್ಪ ಸರ್ಕಾರ ಶುಭ ಸುದ್ದಿ ನೀಡಿತ್ತು. ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನೇಮಿಸಿದ್ದ ಪತ್ರ ಜ.1ರಂದು ಕೈಸೇರಿತ್ತು.
ಹುದ್ದೆ ವಹಿಸಿಕೊಂಡ ಹೊತ್ತಲ್ಲೇ ಹಲವು ಕನಸುಗಳನ್ನೂ ಬಿಚ್ಚಿಟ್ಟಿದ್ದಾರೆ ಸುನಿಲ್ ಪುರಾಣಿಕ್. ಅಕಾಡೆಮಿಯ ಕೆಲಸ ಕಾರ್ಯಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸುವ ಕನಸು ಹೊತ್ತು ಕಾಲಿಟ್ಟಿರುವ ಸುನಿಲ್ ಪುರಾಣಿಕ್ ಎದುರು ಬೆಂಗಳೂರು ಅಂ.ರಾ. ಚಿತ್ರೋತ್ಸವದ ಹೊಣೆಗಾರಿಕೆ ಇದೆ