ಅವನೇ ಶ್ರೀಮನ್ನಾರಾಯಣ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..? ಗಾಂಧಿನಗರದ ಮೂಲಗಳ ಪ್ರಕಾರ ಮೊದಲ ವೀಕೆಂಡ್ ಗಳಿಕೆ 25 ಕೋಟಿಯ ಗಡಿ ದಾಟಿದೆ. ಸೇಲ್ ಆಗಿರುವುದು 15 ಲಕ್ಷಕ್ಕೂ ಹೆಚ್ಚು ಟಿಕೆಟ್. 3 ದಿನಗಳಲ್ಲಿ 5 ಸಾವಿರ ಶೋ ಪ್ರದರ್ಶನಗೊಂಡಿವೆ. ಸ್ಸೋ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಲಕ್ಷ್ಮೀ ದೇವಿಗೆ ಪೂಜೆ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಅಂದಹಾಗೆ.. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದ್ದರೂ, ಇನ್ನಷ್ಟು ಥಿಯೇಟರುಗಳಿಗೆ ಡಿಮ್ಯಾಂಡ್ ಬಂದಿದೆ. 2ನೇ ವಾರಕ್ಕೆ 80 ಚಿತ್ರಮಂದಿರಗಳು, ಸ್ಕ್ರೀನ್‍ಗಳು ಹೆಚ್ಚುವರಿಯಾರಿಗೆ ಸೇರ್ಪಡೆಯಾಗಲಿವೆ.
ತೆಲುಗಿನಲ್ಲಿ ಈ ವಾರ ರಿಲೀಸ್. ಆಗಲೇ ಆಂಧ್ರ, ತೆಲಂಗಾಣದಲ್ಲಿ 36 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. `ನಮ್ಮ ಉದ್ದೇಶದ ಗಡಿಯನ್ನು ಮೊದಲನೇ ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ.. ಎಲ್ಲ ಕೋನಗಳಲ್ಲೂ ಜನ ಮಾತನಾಡುತ್ತಿದ್ದಾರೆ ಅಂದರೆ, ಅದು ನಮ್ಮ ಸಿನಿಮಾದ ನಿಜವಾದ ಗೆಲುವು. ಅಂತಹ ಚಿತ್ರ ಕೊಟ್ಟಿರುವುದಕ್ಕೆ ನನಗೀಗ ಹೆಮ್ಮೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.
3 ವರ್ಷದ ನಂತರ ಪ್ರತ್ಯಕ್ಷರಾದ ನಾರಾಯಣ ರಕ್ಷಿತ್ ಶೆಟ್ಟಿಗೆ, ಮೊದಲ ಚಿತ್ರದಲ್ಲೇ ಬಂಪರ್ ಹೊಡೆದ ನಿರ್ದೇಶಕ ಸೃಷ್ಟಿಕರ್ತ ಸಚಿನ್ ರವಿಗೆ, ಒಂದು ಚಿತ್ರಕ್ಕಾಗಿ ಸುದೀರ್ಘ ಡೇಟ್ಸ್ ಕೊಟ್ಟು ಕಾದ ಲಕ್ಷ್ಮೀ ಶಾನ್ವಿ ಶ್ರೀವಾತ್ಸವ್ ಅವರಿಗೆ ಇದು 2019ರ ಬಂಪರ್ ಉಡುಗೊರೆ.k