` ಸರ್ಕಾರಿ ಮದುವೆ ಭಾಗ್ಯಕ್ಕೆ ಯಶ್-ರಾಧಿಕಾ ಪಂಡಿತ್ ಬ್ರಾಂಡ್ ಅಂಬಾಸಿಡರ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Yash - Radhika Pandit Turns Brand Ambadassor For 'Maduve Bhagya' Government Scheme
Yash Radhika Pandit

ಬಿಜೆಪಿ ಸರ್ಕಾರ ಬಂದ ನಂತರ ಸರ್ಕಾರದಿಂದಲೇ ಸಾಮೂಹಿಕ ಮದುವೆ ಕಾರ್ಯಕ್ರಮ ಘೋಷಿಸಿದ್ದು ನೆನಪಿದೆ ತಾನೇ.. ಯಡಿಯೂರಪ್ಪ ಸರ್ಕಾರದ ಈ ಮದುವೆ ಭಾಗ್ಯ ಯೋಜನೆಯಲ್ಲಿ 1 ಸಾವಿರ ಜೋಡಿಗೆ ಸಾಮೂಹಿಕ ಮದುವೆ ಭಾಗ್ಯ ಸಿಗಲಿದೆ. ಅಷ್ಟೂ ಜೋಡಿಗಳಿಗೆ ಸರ್ಕಾರ 65 ಸಾವಿರ ರೂ. ಮತ್ತು 8 ಗ್ರಾಂ ತಾಳಿಯನ್ನು ನೀಡುವುದಾಗಿ ಘೋಷಿಸಿತ್ತು. ಆ ಕಾರ್ಯಕ್ರಮ 2020ರ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ.

ಆ ಮದುವೆ ಭಾಗ್ಯ ಕಾರ್ಯಕ್ರಮಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಪ್ರಚಾರ ರಾಯಭಾರಿಗಳಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್, ಸುಧಾಮೂರ್ತಿ, ’?ಶ್ರೀ ಶ್ರೀ ಶ್ರೀ ರವಿಶಂಕರ್ ಕೂಡಾ ಸಾಥ್ ನೀಡಲಿದ್ದಾರಂತೆ.