ಸಲ್ಮಾನ್, ಸುದೀಪ್, ಸೋನಾಕ್ಷಿ ಸಿನ್ಹಾ ಕಾಂಬಿನೇಷನ್ನಿನ ದಬಾಂಗ್ 3 ಬಾಕ್ಸಾಫೀಸ್ ಚಿಂದಿ ಚಿಂದಿ ಉಡಾಯಿಸುತ್ತಿದೆ. ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆದ ಸಿನಿಮಾ, ಕನಸಿನ ಓಟ ಮುಂದುವರೆಸಿದೆ. ಫಸ್ಟ್ ವೀಕ್ ಎನ್ಆರ್ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳಿಂದಾಗಿ ಉತ್ತರ ಭಾರತದಲ್ಲಿ ನಿರೀಕ್ಷಿತ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ, 2ನೇ ವಾರ ಚುಲ್ ಬುಲ್ ಪಾಂಡೆಯದ್ದೇ ಹವಾ.
ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದ್ದ ದಬಾಂಗ್ 3, 2ನೇ ವಾರ ಮುಗಿಯುವ ಮುನ್ನವೇ 150 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ. ಪ್ರಭುದೇವ ನಿರ್ದೇಶನದ ದಬಾಂಗ್ 3, ಬಾಲಿವುಡ್ ಸುಲ್ತಾನ್ ಸಲ್ಮಾನ್ ಹಿಟ್ ಲಿಸ್ಟ್ಗೆ ಇನ್ನೊಂದು ಸೇರ್ಪಡೆ