` ಬಾಕ್ಸಾಫೀಸಿನಲ್ಲಿ ಅವನೇ ಶ್ರೀಮನ್ನಾರಾಯಣ ಕಲೆಕ್ಷನ್ ಎಷ್ಟು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
avane srimnananrayana first day collection report
Avane Srimannarayana Movie Image

ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗುವವರೆಗೂ ಅದೇನೇ ಕಾನ್ಫಿಡೆನ್ಸ್ ಇದ್ದರೂ, ಸ್ವಲ್ಪ ಟೆನ್ಷನ್ನಿನಲ್ಲಿರುವಂತೆ ಕಾಣುತ್ತಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಫುಲ್ ಹ್ಯಾಪಿ. ನಾರಾಯಣನ ಬಗ್ಗೆ ವಿಮರ್ಶಕರು, ಪ್ರೇಕ್ಷಕರು ಹೊಗಳಿರುವುದಷ್ಟೇ ಅಲ್ಲ, ಸಿನಿಮಾದ ಬಾಕ್ಸಾಫೀಸ್ ಖಜಾನೆಯೂ ತುಂಬಿದೆ. ನಾರಾಯಣನಿಗೆ ಧನಲಕ್ಷ್ಮಿ ಒಲಿದಿದ್ದಾಳೆ.

ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರದ ಮೊದಲ ದಿನದ ಗಳಿಕೆ 12ರಿಂದ 15 ಕೋಟಿ. ಸಿಂಗಲ್ ಸ್ಕ್ರೀನ್‍ಗಳಿಗಿಂತ ಮಲ್ಟಿಪ್ಲೆಕ್ಸುಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಿಲೀಸ್ ಆದ ಎಲ್ಲ ಕಡೆಗಳಲ್ಲೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ನಿರ್ಮಾಪಕರಿಗೆ ಇನ್ನೂ ಖುಷಿಯ ವಿಷಯವೆಂದರೆ, ಇದು ಕ್ರಿಸ್‍ಮಸ್ ಟೈಂ. ರಜೆ ಮುಗಿದಿಲ್ಲ. ಹೀಗಾಗಿ ಒನ್ಸ್ ಎಗೇಯ್ನ್ ರಕ್ಷಿತ್-ಪುಷ್ಕರ್ ಜೋಡಿಗೆ ಡಿಸೆಂಬರ್ ಲಕ್ಕಿ ಎನಿಸಿಬಿಟ್ಟಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery