ಯುವರಾಜ್ ಕುಮಾರ್. ಡಾ.ರಾಜ್ ಕುಟುಂಬದ ಕುಡಿ. ರಾಘವೇಂದ್ರ ರಾಜ್ಕುಮಾರ್ ಅವರ 2ನೇ ಮಗ. ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ವೇಳೆ ಅದ್ಭುತವಾಗಿ ಕುಣಿದು ವ್ಹಾವ್ ಎನಿಸಿಕೊಂಡಿದ್ದ ಹುಡುಗ. ಚಿತ್ರರಂಗಕ್ಕೆ ಬರಲು ಅವಸರವೇನೂ ಇಲ್ಲ ಎಂದಿದ್ದ ಯುವರಾಜ್ ಕುಮಾರ್, ರಾಜ್ ಕುಮಾರ್ ಟ್ರಸ್ಟ್ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಅವರೀಗ ಹೀರೋ ಆಗೋಕೆ ರೆಡಿ. ಡೈರೆಕ್ಟರ್ ಪುನೀತ್.
ಕನ್ಫ್ಯೂಸ್ ಆಗಬೇಡಿ. ಪುನೀತ್ ಎಂದರೆ, ಯುವರಾಜ್ ಚಿಕ್ಕಪ್ಪ ಪುನೀತ್ ರಾಜ್ಕುಮಾರ್ ಅಲ್ಲ. ಪವರ್ ಸ್ಟಾರ್ ಅಣ್ಣನ ಮಗನ ಚಿತ್ರಕ್ಕೆ ಡೈರೆಕ್ಷನ್ ಮಾಡುತ್ತಿರುವ ನಿರ್ದೇಶಕನ ಹೆಸರು ಪುನೀತ್. ಇವರು ಪ್ರಶಾಂತ್ ನೀಲ್ ಜೊತೆ ಕೆಜಿಎಫ್ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದವರು. ಸ್ಸೋ.. ಡೈರೆಕ್ಟರ್ ಪುನೀತ್, ಯುವ ಚಿತ್ರಕ್ಕೆ ಸ್ಟೋರಿ ಬೋರ್ಡ್ ರೆಡಿ ಮಾಡುತ್ತಿದ್ದಾರೆ. 2020ಕ್ಕೆ ಸಿನಿಮಾ ಲಾಂಚ್ ಆಗಲಿದೆ. ಅಫ್ಕೋರ್ಸ್.. ಅದು ದೊಡ್ಮನೆ ಹಬ್ಬವಾಗಲಿದೆ.