ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರೀಮಿಯರ್ ಶೋ ಚಿತ್ರರಂಗದ ಸ್ಟಾರ್ಗಳ ಮನಸ್ಸು ಗೆದ್ದಿದೆ. ಇಡೀ ಚಿತ್ರರಂಗ ಒಟ್ಟಿಗೇ ಬಂದು ಊರ್ವಶಿಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಚಿತ್ರರಂಗದ ಗಣ್ಯರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿದ್ದರು ಪುಷ್ಕರ್ ಮಲ್ಲಿಕಾರ್ಜುನಯ್ಯ.
ಚಿತ್ರವನ್ನು ನೋಡಿದವರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರವನ್ನು ಹೊಗಳಿದ್ದಾರೆ. ಇದೊಂದು ಹೊಸ ಲೋಕ. ಹೊಸ ಕಲ್ಪನೆ. ಚಿತ್ರ ಅದ್ಭುತವಾಗಿ ಟೇಕಾಫ್ ಆಗಿದೆ ಎಂದಿದ್ದಾರೆ ರವಿಚಂದ್ರನ್. ರವಿಚಂದ್ರನ್ ಸುಖಾಸುಮ್ಮನೆ ಹೊಗಳಲ್ಲ ಎನ್ನುವುದು ಅಭಿಮಾನಿಗಳಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.
ಇನ್ನು ಶಿವರಾಜ್ ಕುಮಾರ್ ಚಿತ್ರದ ಕಾನ್ಸೆಪ್ಟ್, ಮೇಕಿಂಗ್ಗೆ ಫಿದಾ ಆಗಿದ್ದಾರೆ. ಇಂತಾದ್ದೊಂದು ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡಿ ಮೆಚ್ಚಿ ಹರಸಬೇಕು ಎಂದು ಕೋರಿದ್ದಾರೆ.
ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಸಿನಿಮಾ ರಿಲೀಸ್ ಆಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.