ಉದ್ದ ಆರಡಿ..
ಹೃದಯ ಮೆಲೋಡಿ..
ಕೋಪ ಕಾಲಡಿ..
ಬಾ ಬಾ ಬಾ ನಾ ರೆಡಿ..
ಶ್ಯೂರ್ ಶಾಟ್ ಬರೆದಿಡಿ..
ಇದು ಸಿಂಪಲ್ ಸುನಿ ಬರೆದ ಸಾಲು. ಇದು ಅಭಿಮಾನಿಗಳನ್ನು ಅದೆಷ್ಟು ಥ್ರಿಲ್ಲಾಗಿಸಿದೆ ಎಂದರೆ, ಇದು ರಾಬರ್ಟ್ ಚಿತ್ರದ ಹಾಡಿರಬೇಕು ಎಂದು ಕಲ್ಪಿಸಿಕೊಂಡು ಥ್ರಿಲ್ಲಾಗಿಬಿಟ್ಟಿದ್ದಾರೆ. ದರ್ಶನ್, ತರುಣ್ ಸೇರಿದಂತೆ ಎಲ್ಲರಿಗೂ ಈ ಸಾಲುಗಳು ಖುಷಿ ಕೊಟ್ಟಿವೆ.
ವಿಶೇಷವೆಂದರೆ, ಇಡೀ ಸ್ಯಾಂಡಲ್‍ವುಡ್ ರಾಬರ್ಟ್ ಮೋಷನ್ ಪೋಸ್ಟರ್ ಹಬ್ಬವನ್ನು ಸಂಭ್ರಮಿಸಿದೆ.
ನಟ ನಿರ್ದೇಶಕ ರಿಷಬ್ ಶೆಟ್ಟಿ, ಚೇತನ್ ಕುಮಾರ್, ಎಪಿ ಅರ್ಜುನ್, ಅನೂಪ್ ಭಂಡಾರಿ, ಶ್ರೀಮುರಳಿ, ಪ್ರಜ್ವಲ್ ದೇವರಾಜ್, ಮಹೇಶ್ ಕುಮಾರ್, ಪವನ್ ಒಡೆಯರ್,
ನಟಿಯರಾದ ಅಶಿಕಾ ರಂಗನಾಥ್, ಪವಿತ್ರಾ ಗೌಡ,
ನಟರಾದ ಸೃಜನ್ ಲೋಕೇಶ್, ಶರಣ್, ನಿರೂಪ್ ಭಂಡಾರಿ, ಧರ್ಮ ಕೀರ್ತಿರಾಜ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಶೈಲಜಾ ನಾಗ್ ಮೊದಲಾದವರು ಅಭಿನಂದಿಸಿದ್ದಾರೆ.