ಬುದ್ದಿವಂತ 2 ಚಿತ್ರದ ಮೊದಲ ಸೀಕ್ರೆಟ್ ಹೊರಬಿದ್ದಿದೆ. ಗಡ್ಡಧಾರಿ ಉಪ್ಪಿಯ ಈ ಲುಕ್ ಡಿಫರೆಂಟ್ ಎನಿಸುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಮತ್ತು ಸೋನಲ್ ಮಂಥೆರೋ ನಾಯಕಿಯಾಗಿರೋ ಚಿತ್ರವಿದು.
2008ರಲ್ಲಿ ತೆರೆ ಕಂಡಿದ್ದ ಬುದ್ದಿವಂತ ಸೂಪರ್ ಹಿಟ್ ಆಗಿತ್ತು. ಈಗ ಹೆಚ್ಚೂ ಕಡಿಮೆ 10 ವರ್ಷಗಳ ನಂತರ ಬುದ್ದಿವಂತ ಸೀಕ್ವೆಲ್ ಬರುತ್ತಿದೆ. ಹೆಸರು ಬಿಟ್ಟರೆ, ಮತ್ಯಾವುದೇ ಸಂಬಂಧ ಹಳೆಯ ಚಿತ್ರಕ್ಕಿಲ್ಲ.