ದುನಿಯಾ ಸೂರಿ ನಿರ್ದೇಶನದ ಹೊಸ ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಸಪೋರ್ಟ್ ಸಿಕ್ಕಿದೆ. ಪುನೀತ್ ಅವರಿಗೆ ಸದ್ಯಕ್ಕೆ ಅತೀ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇರುವುದು ದುನಿಯಾ ಸೂರಿಗೆ. ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡ್ಗ ಚಿತ್ರಗಳಂತ ಹಿಟ್ ಕೊಟ್ಟಿರುವ ಸೂರಿ, ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಮಾಡಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರವಿದು.
ಟಗರು ಚಿತ್ರದ ಬಳಿಕ ಚರಣ್ ರಾಜ್ ಸಂಗೀತ ನೀಡಿರುವ ಮತ್ತೊಂದು ಬಿಗ್ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಈ ಚಿತ್ರದ ಆಡಿಯೋ ರೈಟ್ಸ್ನ್ನು ಪುನೀತ್ ಅವರ ಪಿಆರ್ಕೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸುಧೀರ್ ಕೆ.ಎಂ. ನಿರ್ಮಾಣದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಿರ್ಮಾಪಕ ನವೀನ್, ಕಾಕ್ರೋಚ್ ಖ್ಯಾತಿಯ ಸುಧಿ, ಅಮೃತಾ ಅಯ್ಯರ್ ಮೊದಲಾದವರು ನಟಿಸಿದ್ದಾರೆ.