ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 2020ರ ಬಹುನಿರೀಕ್ಷಿತ ಸಿನಿಮಾ ರಾಬರ್ಟ್. ಈ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಈ ಚಿತ್ರಕ್ಕೆ ಆಶಾ ಭಟ್ ಹೀರೋಯಿನ್. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಈಗ ಇನ್ನೊಬ್ಬ ಚೆಲುವೆ ಪ್ರತ್ಯಕ್ಷವಾಗಿದ್ದಾರೆ.
ರಾಬರ್ಟ್ ಚಿತ್ರಕ್ಕೆ ಬಂದ ಇನ್ನೊಬ್ಬ ಚೆಲುವೆ ತೇಜಸ್ವಿನಿ ಪ್ರಕಾಶ್. 2008ರಲ್ಲಿ ತೆರೆ ಕಂಡ ದರ್ಶನ್ ಅಭಿನಯದ ಗಜ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದ ತೇಜಸ್ವಿನಿ, ಈಗ ರಾಬರ್ಟ್ ಚಿತ್ರದಲ್ಲಿ ಮತ್ತೂಮ್ಮೆ ದರ್ಶನ್ ಜೊತೆಯಾಗಿದ್ದಾರೆ. ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ತೇಜಸ್ವಿನಿ, ಚಿತ್ರರಂಗದಿಂದ ದೂರವೇ ಉಳಿದಿದ್ದರು.
ಉಮಾಪತಿ ನಿರ್ಮಾಣದ ಚಿತ್ರದಲ್ಲಿ ತೇಜಸ್ವಿನಿ ಪಾತ್ರವೇನು ಎಂಬ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಷ್ಟಕ್ಕೂ ತರುಣ್ ಸುಧೀರ್ ಚಿತ್ರದ ಯಾವ ಗುಟ್ಟನ್ನು ಹೊರಹಾಕಿದ್ದಾರೆ ಹೇಳಿ. ಗುಟ್ಟನ್ನು ಕಾಪಾಡಿಕೊಂಡೇ ಬರುತ್ತಿರುವ ತರುಣ್ ಸುಧೀರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಾಡುಗಳಿಗೆ ಅರ್ಜುನ್ ಜನ್ಯ, ಹರಿಕೃಷ್ಣ ಹಿನ್ನಲೆ ಸಂಗೀತವಿದೆ.