ಡಿಂಗ.. ಬಾಲ್ಯದಲ್ಲಿ ಬಾಲಮಂಗಳ ಎಂಬ ಮಕ್ಕಳ ಮಾಸಪತ್ರಿಕೆ ಓದಿದ್ದವರಿಗೆ ಈ ಹೆಸರು ಖಂಡಿತಾ ಗೊತ್ತಿರುತ್ತೆ. ಈಗ ಆ ಹೆಸರನ್ನೇ ಇಟ್ಟುಕೊಂಡು
ಸಿನಿಮಾ ಮಾಡಿದ್ದಾರೆ ಮೈಸೂರಿನ ಖ್ಯಾತ ಜ್ಯೋತಿಷಿ ಡಾ.ಮೂಗೂರು ಮಧು ದೀಕ್ಷಿತ್. ಐ ಫೋನ್‌ನಲ್ಲಿಯೇ ಇಡೀ ಸಿನಿಮಾ ಚಿತ್ರೀಕರಿಸಿರುವುದು ಈ ಚಿತ್ರದ ವಿಶೇಷ. ಇವರ ಜೊತೆ ಇನ್ನೂ 10 ಜನ ನಿರ್ಮಾಪಕರು ಕೈ ಜೋಡಿಸಿದ್ದಾರೆ.
ಅಭಿಷೇಕ್ ಜೈನ್ ನಿರ್ದೇಶನದ ಚಿತ್ರದಲ್ಲಿ ಅರವ್ ಗೌಡ ನಾಯಕ. ಅನುಶಾ ನಾಯಕಿ. ಕ್ಯಾನ್ಸರ್‌ನಿಂದಾಗಿ ಸಾಯುತ್ತಿರುವ ತನ್ನ ಪ್ರೀತಿಯ ನಾಯಿಯನ್ನು ತನ್ನದೇ ಗುಣವುಳ್ಳವರಿಗೆ ನೀಡಲು ಹೊರಡುವ ಕಥೆ ಡಿಂಗನಲ್ಲಲಿದೆ. ಜನವರಿ 4ರಂದು ಸಿನಿಮಾದ ಆಡಿಯೋ ರಿಲೀಸ್ ಆಗುತ್ತಿದ್ದು, ಕನ್ನಡ ಚಿತ್ರರಂಗದ ಸ್ಟಾರ್ ನಟರೊಬ್ಬರು ಆಡಿಯೋ ರಿಲೀಸ್ ಮಾಡಲಿದ್ದಾರೆ.