ಬಿಡುಗಡೆಯೇ ಅಗದ ರಾಬರ್ಟ್ ಚಿತ್ರ, ಶೂಟಿಂಗ್‌ನಲ್ಲಿಯೇ 100 ದಿನ ಪೂರೈಸಿದೆ. ರಾಬರ್ಟ್ ಶೂಟಿಂಗ್ ಅವಧಿ ಈಗಾಗಲೇ 100 ದಿನಗಳನ್ನು ದಾಟಿ ಮುನ್ನಡೆದಿದ್ದು, ಇನ್ನೂ 15 ದಿನ ಶೂಟಿಂಗ್ ಮಾಡಬೇಕಿದೆಯಂತೆ. ತರುಣ್ ಸುಧೀರ್ ನಿರ್ದೇಶನದ ಭಾರಿ ಬಜೆಟ್‌ನ ಸಿನಿಮಾ ರಾಬರ್ಟ್. ಈ ಚಿತ್ರಕ್ಕಾಗಿ ದರ್ಶನ್ ತಮ್ಮ ಎಂದಿನ ಕಟ್ಟುನಿಟ್ಟಿನ ರೂಲ್ಸ್ ಕೂಡಾ ಬ್ರೇಕ್ ಮಾಡಿದ್ದಾರೆ.
ಸಾಮಾನ್ಯವಾಗಿ ಒಂದು ಸಿನಿಮಾಗೆ 60-65 ದಿನಗಳ ಕಾಲ್‌ಶೀಟ್ ಕೊಡುತ್ತಿದ್ದ ದರ್ಶನ್, ಈ ಚಿತ್ರಕ್ಕೆ ಅದನ್ನು ಸಡಿಲ ಮಾಡಿದ್ದಾರೆ. ಕಾರಣ ಇಷ್ಟೆ, ಚಿತ್ರಕ್ಕೆ ಅಷ್ಟು ದಿನಗಳ ಶೂಟಿಂಗ್ ಏಕೆ ಬೇಕು ಎಂಬುದನ್ನು ತರುಣ್ ವಿವರಿಸಿದ್ದಾರೆ. ಅದು ದರ್ಶನ್‌ಗೆ ಓಕೆ ಎನಿಸಿದೆ.
ಚಿತ್ರದ ಕಥೆಯೇ ಸುದೀರ್ಘ ಶೂಟಿಂಗ್‌ನ್ನು ಡಿಮ್ಯಾಂಡ್ ಮಾಡುತ್ತೆ. ಹೀಗಾಗಿ 100ಕ್ಕೂ ಹೆಚ್ಚು ದಿನ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ಮೈಸೂರು, ಬೆಂಗಳೂರು, ಹೈದರಾಬಾದ್ ಶೂಟಿಂಗ್ ಮುಗಿಸಿದ್ದೇವೆ. ಈಗ ವಾರಾಣಸಿಯಲ್ಲಿದ್ದೇವೆ. ಅದ್ಧೂರಿ ಸೆಟ್ ಸಿದ್ಧ ಮಾಡಿದ್ದೇವೆ ಎಂದಿದ್ದಾರೆ ತರುಣ್ ಸುಧೀರ್. ಉಮಾಪತಿ ಬ್ಯಾನರ್‌ನ ಚಿತ್ರ 2020ರ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.