ನೀನಾಸಂ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರ ಡಬ್ಬಿಂಗ್ ಮುಗಿಸಿದೆ. ವ್ಯವಸ್ಥೆಯಲ್ಲಿದ್ದುಕೊಂಡೇ ಆ ವ್ಯವಸ್ಥೆ ವಿರುದ್ಧ ಬಂಡೇಳುವ ಹೋರಾಟಗಾರನ ಕಥೆ ಗೋದ್ರಾದಲ್ಲಿದೆ. ಚಿತ್ರದ ಡಬ್ಬಿಂಗ್ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ.
ಚಿತ್ರದ ನಾಯಕನ ಇಂಟ್ರೊಡಕ್ಷನ್‌ಗಾಗಿ ಜೈ ಬೋಲೋ.. ಜೈ ಜೈ ಬೋಲೋ.. ಜೈಜೈ ಹನುಮಾನ್. ಅಂದ್ಕೊAಡAತೆ ಆಗೋದಿಲ್ಲ ಮನುಷ್ಯನ ಜನ್ಮ ಅನ್ನೋ ಹಾಡಿನ ಚಿತ್ರೀಕರಣ ಆಗಬೇಕಿದೆ.
ಸತೀಶ್ ಮತ್ತು ಶ್ರದ್ಧಾ ಇಬ್ಬರೂ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು. ಸತೀಶ್ ಸುಭಾಶ್ ಹೆಸರಿನ ಪಾತ್ರದಲ್ಲಿದ್ದರೆ, ಶ್ರದ್ಧಾ ಸತೀಶ್ ಸಂಗಾತಿ. ಕೆ.ಎಸ್. ನಂದೀಶ್ ನಿರ್ದೇಶನದ ಚಿತ್ರಕ್ಕೆ ಜಾಕೊಬ್ ಫಿಲಂಸ್ ಮತ್ತು ಲೀಡರ್ ಫಿಲಂಸ್ ನಿರ್ಮಾಪಕರು.