ಯಾವುದೇ ಭಾಷೆಯ ಚಿತ್ರರಂಗಕ್ಕೆ ವಿಲನ್ ಆಗಿರುವ ತಮಿಳು ರಾರ‍್ಸ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಗೂ ಖಳನಾಯಕರಾಗಿ ಕಾಡಿದ್ದಾರೆ. ಚಿತ್ರ ರಿಲೀಸ್ ಆದ ದಿನವೇ ತಮಿಳು ರಾರ‍್ಸ್ ಚಿತ್ರದ ಪೈರಸಿ ವಿಡಿಯೋ ರಿಲೀಸ್ ಮಾಡಿದೆ. ಅದೂ ಹೆಚ್‌ಡಿ ವರ್ಷನ್‌ನಲ್ಲಿ.
ಬಾಲಿವುಡ್ ಮಂದಿ ಸಿನಿಮಾವನ್ನು ಎಲ್ಲ ಸುರಕ್ಷತಾ ಕ್ರಮಗಳನ್ನಿಟ್ಟುಕೊಂಡೇ ರಿಲೀಸ್ ಮಾಡುತ್ತಾರೆ. ಆದರೂ ತಮಿಳು ರಾರ‍್ಸ್, ಅವರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಒಂದು ಕಡೆ ಸಲ್ಮಾನ್, ಸುದೀಪ್ ಕಾಂಬಿನೇಷನ್ನಿನ ಸಿನಿಮಾ ಬಾಕ್ಸಾಫೀಸನ್ನು ಚಿಂದಿ ಉಡಾಯಿಸುತ್ತಿದ್ದರೆ, ತಮಿಳು ರಾರ‍್ಸ್ ನಿರ್ಮಾಪಕರಿಗೆ ಟೆನ್ಷನ್ ತಂದಿಟ್ಟಿದ್ದಾರೆ