ಅವನೇ ಶ್ರೀಮನ್ನಾರಾಯಣ ರಿಲೀಸ್ ಇರೋದು ಮುಂದಿನ ವಾರ. ಇನ್ನೂ 10 ದಿನ ಬಾಕಿಯಿದೆ. ಆದರೆ ರಕ್ಷಿತ್ ಶೆಟ್ಟಿ ಹ್ಯಾಂಡ್ಸಪ್ ಹವಾ ಹೇಗಿದೆಯೆಂದರೆ.. ಆಗಲೇ ಬುಕ್ಕಿಂಗ್ ಶುರುವಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಥಿಯೇಟರುಗಳಲ್ಲಿ ಮಾತ್ರವೇ ಸದ್ಯಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಇದ್ದು, ಉಳಿದ ಥಿಯೇಟರುಗಳಲ್ಲಿಯೂ ಇನ್ನೇನು ಶುರುವಾಗಲಿದೆ.
ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ ಮೋಡಿ ಹಾಗಿದೆ. ಅದು ತೆಲುಗಿನಲ್ಲಿ ಮೋಡಿ ಮಾಡುತ್ತಿದೆ. ಜೊತೆಗೆ ದಿಲ್ ರಾಜುರಂಥ ಖ್ಯಾತ ವಿತರಕ ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು, ಅಲ್ಲಿ ಶಾನ್ವಿ ಶ್ರೀವಾತ್ಸವ್ ಪರಿಚಿತ ಮುಖ. ಹೀಗಾಗಿ ತೆಲುಗಿನಲ್ಲೂ ಒಳ್ಳೆಯ ಓಪನಿಂಗ್ ಸಿಗುತ್ತಿದೆ. ಇದೆಲ್ಲದರಿಂದಾಗಿ ಹ್ಯಾಪಿಯಾಗಿರೋದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.