ಟೈA ನಂದು.. ತಾರೀಕು ನಂದು.. ಎನ್ನುತ್ತಲೇ ಕನ್ನಡದಲ್ಲಿ ಹವಾ ಎಬ್ಬಿಸಿದ್ದರು ಸಲ್ಮಾನ್ ಖಾನ್. ಅವರು ಹೇಳಿದ ಟೈಮು, ಡೇಟು ಬಂದಾಗಿದೆ. ದಬಾಂಗ್ 3 ಥಿಯೇಟರುಗಳಲ್ಲಿದೆ. ಒಂದೇ ದಿನ.. ಕನ್ನಡ ಮತ್ತು ಹಿಂದಿ ಎರಡೂ ವರ್ಷನ್‌ನಲ್ಲಿ ಬಂದಿದೆ ದಬಾಂಗ್ 3.
ಸಲ್ಮಾನ್ ಖಾನ್ ಕನ್ನಡದಲ್ಲಿ ಬರಲು ಮೂಲ ಕಾರಣ ಕಿಚ್ಚ ಸುದೀಪ್. ಬೇರೆ ಭಾಷೆಯವರು ಕನ್ನಡದಲ್ಲಿ ಮಾತನಾಡಬೇಕು ಎಂದು ಬಯಸುವ ನಾವು, ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಬಂದಾಗ ಬಿಡಬೇಕು. ಆಗಲೇ ಕನ್ನಡ ಬೆಳೆಯೋದು ಎನ್ನುವ ಸುದೀಪ್, ದಬಾಂಗ್ 3ಯಲ್ಲಿ ಬಲ್ಲಿ ಸಿಂಗ್ ಆಗಿದ್ದಾರೆ. ಚುಲ್ ಬುಲ್ ಪಾಂಡೆ ಎದುರು ವಿಲನ್. ಸೋನಾಕ್ಷಿ ಸಿನ್ಹಾ ಎಂದಿನAತೆ ಸಲ್ಮಾನ್ ಜೋಡಿ.
ವಿಶೇಷವೆಂದರೆ ಈ ಚಿತ್ರಕ್ಕೆ ಪ್ರಭುದೇವ ಡೈರೆಕ್ಟರ್. ಡಬ್ಬಿಂಗ್ ಮಾಡುವಾಗ ಸುದೀಪ್ ನೀಡಿದ ಸಹಕಾರವನ್ನು ನೆನಪಿಸಿಕೊಂಡಿರುವ ಪ್ರಭುದೇವ, ಸುದೀಪ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.