ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಸಿನಿಮಾಗೆ ರಾಜಕುಮಾರಿ ಜೋಡಿಯಾಗಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ರಾಜಕುಮಾರದಲ್ಲಿ ಜೋಡಿಯಾಗಿದ್ದ ಪ್ರಿಯಾ ಆನಂದ್ ಶಿವರಾಜ್ ಕುಮಾರ್ ಎದುರು ನಾಯಕಿಯಾಗಲಿದ್ದಾರೆ.
ಅಂದಹಾಗೆ ಪ್ರಿಯಾ, ಶಿವಣ್ಣ ಜೋಡಿಯಾಗುತ್ತಿರುವ ಚಿತ್ರದ ಒಂದೊಂದೇ ಡೀಟೈಲ್ಸ್ ಈಗಷ್ಟೇ ಹೊರಬೀಳುತ್ತಿದೆ. ತಮಿಳಿನಲ್ಲಿ ವಿಶ್ವಾಸಂನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಸತ್ಯಜ್ಯೋತಿ ಫಿಲಂಸ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದೆ. ಹಲವು ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರಿಗಾಗಿ ಸತ್ಯಜ್ಯೋತಿ ಎಂಬ ಸಿನಿಮಾ ನಿರ್ಮಿಸಿದ್ದ ಸಂಸ್ಥೆ ಅದು. ಈ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಸಂಭಾಷಣೆ ಬರೆಯುತ್ತಿದ್ದು, ಟಗರು ಚರಣ್ ರಾಜ್ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಅಂದಹಾಗೆ ಚಿತ್ರದ ಹೆಸರು ಆರ್ಡಿಎಕ್ಸ್ ಎನ್ನಲಾಗಿದ್ದು, ಚಿತ್ರದಲ್ಲಿ ಮತ್ತೊಮ್ಮೆ ಶಿವರಾಜ್ ಕುಮಾರ್ ಖಾಕಿ ಖದರುತೋರಲಿದ್ದಾರಂತೆ.