ಒಮರ್ಟಾ... ಅದು ಅಂಡರ್ವರ್ಲ್ಡ್ನಲ್ಲಿ ಸದಾ ಚಾಲ್ತಿಯಲ್ಲಿರೋ ಪದ. ರವಿ ಬೆಳಗೆರೆ ಬರೆದಿರುವ ಆ ಪುಸ್ತಕ ರೌಡಿಸಂ ಜಗತ್ತಿನ ಕಥೆಯನ್ನು ಹಸಿ ಹಸಿಯಾಗಿ ಹೇಳಿತ್ತು. ಈಗ ಆ ಕಥೆ, ಸಿನಿಮಾ ಆಗುತ್ತಿದೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವನ್ನು ರಿಲೀಸ್ ಮಾಡಿದ ನಂತರ ಆ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಜನಾರ್ದನ್ ಚಿಕ್ಕಣ್ಣ.
ರಿಷಿ, ಧನ್ಯಾ ಅಭಿನಯದ ಅನೂರ್ ನಿರ್ದೇಶನದ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಕಥೆಗಾರ ಮತ್ತು ನಿರ್ಮಾಪಕರಲ್ಲಿ ಒಬ್ಬರು. ಇದಾದ ನಂತರ ಒಮರ್ಟಾ ಕೈಗೆತ್ತಿಕೊಳ್ಳಲಿದ್ದಾರೆ.
ಈಗಾಗಲೇ ಅನೀಶ್ ತೇಜೇಶ್ವರ್ ಹೀರೋ ಆಗಿ ಆಯ್ಕೆಯಾಗಿದ್ದು, ಮತ್ತೊಂದು ಪ್ರಮುಖ ಪಾತ್ರಕ್ಕೆ ರಂಗಾಯಣ ರಘು ಅವರನ್ನು ಸಂಪರ್ಕಿಸಲಾಗಿದೆ. ಗುಳ್ಟು ಟೀಂ ಮತ್ತೊಮ್ಮೆ ಈ ಚಿತ್ರದಲ್ಲೂ ಕಂಟಿನ್ಯೂ ಆಗಲಿದೆ.