ದ.ಆಫ್ರಿಕಾದಲ್ಲಿ ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಅವರನ್ನು ಪುಂಡರು ಚುಡಾಯಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆ ಇದು. ಜೋಹಾನ್ಸ್ಬರ್ಗ್ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಪುಂಡರ ಗುಂಪು ಆಶಿಕಾ ಮೇಲೆ ಕಣ್ಣು ಹಾಕಿ ಕಿರಿಕ್ ಮಾಡಿದೆ. ಸಿಟ್ಟಿಗೆದ್ದ ಆಶಿಕಾ, ಪುಂಡನೊಬ್ಬನ ಕಪಾಳಕ್ಕೆ ಬಾರಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಾಗ ಹೀರೋ ಇಶಾನ್ ಬಂದು ರೌಡಿಗಳನ್ನು ಹೊಡೆದು ಬಡಿದು ಆಶಿಕಾರನ್ನು ರಕ್ಷಿಸಿದ್ದಾರೆ.
ಇದು ರೆಮೋ ಚಿತ್ರದ ದೃಶ್ಯ. ಈ ಸೀನ್‌ನ್ನು ಡೈರೆಕ್ಟ್ ಮಾಡಿರೋದು ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ. ಪವನ್ ಒಡೆಯರ್ ನಿರ್ದೇಶನದ ಚಿತ್ರ ದ.ಆಫ್ರಿಕಾ ಟೂರ್ ಮುಗಿಸಿಕೊಂಡು ವಾಪಸ್ಸಾಗಿದೆ. ಮುಂದಿನ ಭಾಗವೂ ವಿದೇಶದಲ್ಲಿಯೇ ಇದೆ. ಚಿತ್ರದ ಶೂಟಿಂಗ್ ಬಹುತೇಕ ವಿದೇಶದಲ್ಲಿಯೇ ನಡೆಯಲಿದೆ.