ನಡುಗುತಿದೆ ಎದೆಗೂಡು.. ಸುಡುಗಾಡು ಬರಿ ಮೌನ.. ತೆವಳುತಿದೆ ವಾತ್ಸಲ್ಯ.. ಬರಿ ಮೋಸ ದ್ವೇಷಾ.. ಇದೇ ಜಮಾನಾ..
ಇದು ಜೆಂಟಲ್‌ಮ್ಯಾನ್ ಚಿತ್ರದ ಗೀತೆ. ಹಾಡಿರುವುದು ವಸಿಷ್ಠ ಸಿಂಹ. ಅವರ ಕಂಚಿನAತಹ ಕಂಠದಲ್ಲಿ ಹಾಡಿನ ಫೋರ್ಸು ಮತ್ತಷ್ಟು ಹೆಚ್ಚಿದೆ. ಪ್ರಜ್ವಲ್ ದೇವರಾಜ್ ಈ ಹಿಂದೆ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದ ರೋಷಾವೇಷದ ಪಾತ್ರದಲ್ಲಿದ್ದಾರೆ.
ಧನಂಜಯ್ ದಿಡಿಗ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಸಾಹಿತ್ಯ ಕಿಕ್ಕೇರಿಸುತ್ತಿದೆ. ಗುರುದೇಶಪಾಂಡೆ ನಿರ್ಮಾಣದ ಚಿತ್ರಕ್ಕೆ ಜಡೇಶ್ ಕುಮಾರ್ ನಿರ್ದೇಶಕ.