` ಅವನೇ ಶ್ರೀಮನ್ನಾರಾಯಣ ಕನ್ನಡದಲ್ಲಷ್ಟೇ ಮೊದಲು ಏಕೆ..? - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
reaso behind avane srimnnarayana's multiple release dates
Avane Srimmannarayana

ಅವನೇ ಶ್ರೀಮನ್ನಾರಾಯಣ ಸಿನಿಮಾ ಇದೇ ಡಿಸೆಂಬರ್ 27ಕ್ಕೆ ತೆರೆ ಕಾಣುತ್ತಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿಯೂ ಸಿನಿಮಾ ಸಿದ್ಧವಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್ನ ಮಹತ್ವಾಕಾಂಕ್ಷೆಯ ಚಿತ್ರವಿದು. ಆದರೆ, ಬೇರೆ ಭಾಷೆಗಳಲ್ಲಿ ಬೇರೆ ಬೇರೆ ದಿನಾಂಕಗಳಂದು ಸಿನಿಮಾ ರಿಲೀಸ್ ಆಗುತ್ತಿದೆ. ಹೀಗೇಕೆ ಎಂಬ ಪ್ರಶ್ನೆಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಮರ್ಥ ಉತ್ತರ ಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗ ಉತ್ತುಂಗದ ಕಡೆ ನಡೆಯುತ್ತಿರುವ ಸಂದರ್ಭದಲ್ಲಿ ಒಂದು ಬೃಹತ್ ಹಾಗೂ ವಿಶೇಷ ಸಿನೆಮಾ ಮಾಡಿದಾಗ ಅದನ್ನು ಮೊದಲು ಕನ್ನಡದಲ್ಲೇ ಅನ್ಯ ರಾಜ್ಯಗಳಲ್ಲಿ ಬಿಡುಗಡೆ ಮಾಡಿದಲ್ಲಿ, ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರಗಳ ಮೇಲೆ ಒಂದು ವಿಶೇಷವಾದ ಅಭಿಮಾನ ಮೂಡಬಹುದೆಂಬ ಒಂದು ಕನಸಿನಿಂದ #ASN ಚಿತ್ರವನ್ನು ವಿಶ್ವದಾದ್ಯಂತ 27 ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ ಪುಷ್ಕರ್.

ಮೊದಲು ಕನ್ನಡ, ನಂತರ ಬೇರೆ ಭಾಷೆ ಎನ್ನುವ ಪಾಲಿಸಿ ಪಾಲಿಸುತ್ತಿದ್ದಾರೆ ಪುಷ್ಕರ್. ಹೀಗಾಗಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಅವನೇ ಶ್ರೀಮನ್ನಾರಾಯಣ, ಬೇರೆ ಭಾಷೆಗಳಲ್ಲಿ ಬೇರೆ ಬೇರೆ ದಿನ ತೆರೆ ಕಾಣುತ್ತಿದೆ. ತೆಲುಗಿನಲ್ಲಿ ಜನವರಿ 1ರಂದು ಹಾಗೂ ತಮಿಳು, ಮಲಯಾಳಂನಲ್ಲಿ ಜನವರಿ 3ರಂದು ಮತ್ತು ಹಿಂದಿಯಲ್ಲಿ ಜನವರಿ 17ರಂದು ರಿಲೀಸ್ ಆಗುತ್ತಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery